ಬಾಲಿವುಡ್ ಬೆಡಗಿ ಆಲಿಯಾ ಭಟ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದ ಯುವಕನಿಗೆ ನಟಿ ಕೋವಿಡ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ನಟ-ನಟಿಯರು ಕಂಡ ಕೂಡಲೇ ಅಭಿಮಾನಿಗಳು ಮುಗಿಬೀಳೋದು, ಫೋಟೋ - ಸೆಲ್ಫಿ ಕ್ಲಿಕ್ಕಿಸಿಕೊಳ್ಲೋದು ಸಹಜ. ಆದರೆ, ಎಲ್ಲೇ ಆದ್ರೂ ಕೋವಿಡ್ ನಿಯಮ ಪಾಲನೆ ಕಡ್ಡಾಯ. ನಟಿ ಆಲಿಯಾ ಭಟ್ ಕಂಡ ಕೂಡಲೇ ಅವರ ಬಳಿ ಬಂದ ಅಭಿಮಾನಿಯೊಬ್ಬ ಸರಿಯಾಗಿ ಮಾಸ್ಕ್ ಧರಿಸಿರಲಿಲ್ಲ. ಆ ವೇಳೆ ಆಲಿಯಾ ಭಟ್, ಮೊದಲು ಸರಿಯಾಗಿ ಮಾಸ್ಕ್ ಧರಿಸಿ ಎಂದು ತಿಳಿಸಿ ನಂತ್ರ ಸೆಲ್ಫಿಗೆ ಫೋಸ್ ನೀಡಿದ್ರು. ಎಲ್ಲೇ ಹೋದರೂ ಕೋವಿಡ್ ನಿಯಮ ಪಾಲನೆ ಮರೆಯದಿರಿ ಎಂದು ಸಲಹೆಯನ್ನೂ ನೀಡಿದರು.