ಮುಂಬೈ: 2022 ರ ಜನವರಿ 26 ರಂದು ಬಹು ನಿರೀಕ್ಷಿತ "ಬಚ್ಚನ್ ಪಾಂಡೆ" ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಕಟಿಸಿದ್ದಾರೆ.
ನಿರ್ಮಾಪಕ ಸಾಜಿದ್ ನಡಿಯಾದ್ವಾಲಾ, ಚಿತ್ರದ ಬಿಡುಗಡೆಯ ದಿನಾಂಕವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಅವರ ಒಂದು ನೋಟ ಸಾಕು.! ಬಚ್ಚನ್ ಪಾಂಡೆ 2022 ರ ಜನವರಿ 26 ರಂದು ಬಿಡುಗಡೆಯಾಗುತ್ತಿದೆ." ಎಂದು ನಿರ್ಮಾಪಕ ಸಾಜಿದ್ ನಡಿಯಾದ್ವಾಲಾ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಅಕ್ಷಯ್ ಕುಮಾರ್ ಸಹ ಟ್ವೀಟ್ ಮಾಡಿದ್ದು, ಚಿತ್ರದ ರಿಲೀಸ್ ಡೇಟ್ನ್ನು ಹಂಚಿಕೊಂಡಿದ್ದಾರೆ.
-
His one look is enough! #BachchanPandey releasing on 26th January, 2022! #SajidNadiadwala @farhad_samji @kritisanon @Asli_Jacqueline @ArshadWarsi @NGEMovies pic.twitter.com/ZFiPPJax7R
— Akshay Kumar (@akshaykumar) January 23, 2021 " class="align-text-top noRightClick twitterSection" data="
">His one look is enough! #BachchanPandey releasing on 26th January, 2022! #SajidNadiadwala @farhad_samji @kritisanon @Asli_Jacqueline @ArshadWarsi @NGEMovies pic.twitter.com/ZFiPPJax7R
— Akshay Kumar (@akshaykumar) January 23, 2021His one look is enough! #BachchanPandey releasing on 26th January, 2022! #SajidNadiadwala @farhad_samji @kritisanon @Asli_Jacqueline @ArshadWarsi @NGEMovies pic.twitter.com/ZFiPPJax7R
— Akshay Kumar (@akshaykumar) January 23, 2021
ಇದನ್ನೂ ಓದಿ: ನಟ ವರುಣ್ ಧವನ್ ಮದುವೆ : ಆಲಿಬಾಗ್ಗೆ ಆಗಮಿಸಿದ ಮದುಮಗ
ನಿರ್ದೇಶಕ ಫರ್ಹಾದ್ ಸಾಮ್ಜಿ ಈ ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಿದ್ದಾರೆ. ತಾರಾಗಣದಲ್ಲಿ ನಟರಾದ ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡೀಸ್, ಅರ್ಷದ್ ವಾರ್ಸಿ ಮತ್ತು ಪಂಕಜ್ ತ್ರಿಪಾಠಿ ಇದ್ದಾರೆ. ಚಿತ್ರದ ಚಿತ್ರೀಕರಣವನ್ನು ಪ್ರಸ್ತುತ ರಾಜಸ್ಥಾನದ ಜೈಸಲ್ಮೇರ್ನಲ್ಲಿ ನಡೆಸಲಾಗುತ್ತಿದೆ.
ನಟ ಅಕ್ಷಯ್ ಕುಮಾರ್ ತಾವು ನಟಿಸುತ್ತಿರುವ ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರ "ಸೂರ್ಯವಂಶಿ" ಬಿಡುಗಡೆ ದಿನಾಂಕದ ನಿರೀಕ್ಷೆಯಲ್ಲಿದ್ದಾರೆ.