ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ತನ್ನ ಅಭಿಮಾನಿಗಳಿಗೆ ಸೂಪರ್ ಸಂಡೆಯ ಗಿಫ್ಟ್ ಕೊಟ್ಟಿದ್ದಾರೆ. ಅದೇನಪ್ಪ ಅಂದ್ರಾ? ನಾಳೆ ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಸಿನಿಮಾದ ಟ್ರೇಲರ್ ರಿಲೀಸ್ ಆಗುತ್ತಿದೆ. ಇದ್ರ ಜೊತೆಗೆ ಇಂದು ಹೊಸದೊಂದು ಮೋಷನ್ ಪೋಸ್ಟರ್ ಹಾಕಿರುವ ಅಕ್ಷಯ್ ನಾಳೆ ಟ್ರೇಲರ್ ನೋಡಲು ರೆಡಿಯಾಗಿರಿ ಎಂದಿದ್ದಾರೆ.
ಚಿತ್ರದಲ್ಲಿ ಅಕ್ಷಯ್ ಪೊಲೀಸ್ ಪಾತ್ರ ಮಾಡಿದ್ದಾರೆ. ಇವರ ಜೊತೆ ರಣವೀರ್ ಸಿಂಗ್ ಮತ್ತು ಅಜಯ್ ದೇವಗನ್ ಕೂಡ ಪೊಲೀಸ್ ಅಧಿಕಾರಿಗಳಾಗಿ ಸೂರ್ಯವಂಶಿಗೆ ಸಾಥ್ ನೀಡಿದ್ದಾರೆ.
- " class="align-text-top noRightClick twitterSection" data="
">
ಅಕ್ಷಯ್ ಶೇರ್ ಮಾಡಿರುವ ಮೋಷನ್ ಪೋಸ್ಟರ್ನಲ್ಲಿ, ಗಾಗಲ್ ಕನ್ನಡಕ ಹಾಕಿ, ಕೈಯ್ಯಲ್ಲಿ ರೈಫಲ್ ಹಿಡಿದು ಅಕ್ಷಯ್ ರಗಡ್ ಲುಕ್ನಲ್ಲಿ ಮಿಂಚಿದ್ದಾರೆ. ಬ್ಯಾಗ್ರೌಂಡ್ನಲ್ಲಿ ಸೂರ್ಯವಂಶಿ ಎಂಬ ವಾಯ್ಸ್ ಕೇಳುತ್ತಿದ್ದು, ಪೊಲೀಸ್ ಸೈರನ್ ಶಬ್ದ ಕೇಳುತ್ತದೆ.
ಚಿತ್ರಕ್ಕೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದು, ಇದೇ ತಿಂಗಳ 27ಕ್ಕೆ ಸಿನಿಮಾ ರಿಲೀಸ್ ಸಾಧ್ಯತೆಗಳಿವೆ.