ಭೋಪಾಲ್: ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಕೃತಿ ಸನನ್ ಅಭಿನಯದ 'ಬಚ್ಚನ್ ಪಾಂಡೆ' ಸಿನಿಮಾ ಹೋಳಿ ಹಬ್ಬದಂದು ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಬೆನ್ನಲ್ಲೇ ನಟ ಅಕ್ಷಯ್ ಮುಂಬರುವ ಚಿತ್ರ 'ಸೆಲ್ಫಿ' ಶೂಟಿಂಗ್ಗಾಗಿ ಭೋಪಾಲ್ ತಲುಪಿದ್ದಾರೆ.
ಭೋಪಾಲ್‌ನಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದು, ಇಮ್ರಾನ್ ಹಶ್ಮಿ ಕೂಡ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಸೆಲ್ಫಿ' ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಮಲಯಾಳಂನ ಡ್ರೈವಿಂಗ್ ಲೈಸೆನ್ಸ್ ಚಿತ್ರದ ರಿಮೇಕ್ ಆಗಿದೆ.
ಚಿತ್ರ ಭಾರತಿ ಚಲನಚಿತ್ರೋತ್ಸವದಲ್ಲಿ ಭಾಗಿ: ಭೋಪಾಲ್‌ನ ಮಖನ್‌ಲಾಲ್ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 25 ರಿಂದ ಆರಂಭವಾಗಲಿರುವ ಚಿತ್ರ ಭಾರತಿ ಚಲನಚಿತ್ರೋತ್ಸವದ ಕಾರ್ಯಕ್ರಮದಲ್ಲೂ ಅಕ್ಷಯ್ ಕುಮಾರ್ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ದೇಶಾದ್ಯಂತ ಖ್ಯಾತ ಚಲನಚಿತ್ರ ನಿರ್ಮಾಪಕರು ಮತ್ತು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಶನಯಾ ಕಪೂರ್ ಫೋಟೋಗಳಿಗೆ 'ಹಾಟ್' ಎಂದ ಸುಹಾನಾ ಖಾನ್