ನವದೆಹಲಿ: ಎರಡನೇ ಹಂತದ ಕೋವಿಡ್ ಅಲೆಗೆ ಸಿಲುಕಿರುವ ಭಾರತ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಇದರಿಂದ ಹೊರಬರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಬೆಡ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಮೂಲ ಸೌಕರ್ಯಗಳ ಕೊರತೆ ಉಂಟಾಗಿದೆ. ಹೀಗಾಗಿ ಪ್ರತಿದಿನ ನೂರಾರು ಕೋವಿಡ್ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.
ಮಹಾಮಾರಿ ವಿರುದ್ಧದ ಹೋರಾಟಕ್ಕೆ ಅನೇಕರು ಕೈಜೋಡಿಸುತ್ತಿದ್ದು, ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಸಹಾಯಹಸ್ತ ಚಾಚಿದ್ದಾರೆ. ಈ ನಿಟ್ಟಿನಲ್ಲಿ ಒಂದು ಕೋಟಿ ರೂ. ದೇಣಿಗೆ ನೀಡಿದ್ದಾರೆ. ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರ ಗಂಭೀರ್ ಫೌಂಡೇಷನ್ಗೆ 1 ಕೋಟಿ ರೂ. ದೇಣಿಗೆ ನೀಡಿರುವ ನಟ ಆಹಾರ, ಆಕ್ಸಿಜನ್ ಸೇರಿದಂತೆ ಪ್ರಮುಖ ವಸ್ತುಗಳ ಖರೀದಿಗೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
-
Every help in this gloom comes as a ray of hope. Thanks a lot @akshaykumar for committing Rs 1 crore to #GGF for food, meds and oxygen for the needy! God bless 🙏🏻 #InThisTogether @ggf_india
— Gautam Gambhir (@GautamGambhir) April 24, 2021 " class="align-text-top noRightClick twitterSection" data="
">Every help in this gloom comes as a ray of hope. Thanks a lot @akshaykumar for committing Rs 1 crore to #GGF for food, meds and oxygen for the needy! God bless 🙏🏻 #InThisTogether @ggf_india
— Gautam Gambhir (@GautamGambhir) April 24, 2021Every help in this gloom comes as a ray of hope. Thanks a lot @akshaykumar for committing Rs 1 crore to #GGF for food, meds and oxygen for the needy! God bless 🙏🏻 #InThisTogether @ggf_india
— Gautam Gambhir (@GautamGambhir) April 24, 2021
ಇದಕ್ಕೆ ಸಂಬಂಧಿಸಿದಂತೆ ಸಂಸದ ಗೌತಮ್ ಗಂಭೀರ್ ಟ್ವೀಟ್ ಮಾಡಿ ನಟನಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಕತ್ತಲೆಯಲ್ಲಿನ ಪ್ರತಿಯೊಂದು ಸಹಾಯವು ಭರವಸೆಯ ಕಿರಣವಾಗಿದ್ದು, ದೇವರು ಒಳ್ಳೆಯದು ಮಾಡಲಿ ಎಂದಿದ್ದಾರೆ. ಕಳೆದ ವರ್ಷ ಕೂಡ ಕೊರೊನಾ ಸಂದರ್ಭದಲ್ಲಿ ಪ್ರಧಾನಿ ಮೋದಿ ರಿಲೀಫ್ ಫಂಡ್ಗೆ ನಟ ಅಕ್ಷಯ್ ಕುಮಾರ್ 25 ಕೋಟಿ ರೂ. ದೇಣಿಗೆ ನೀಡಿದ್ದರು.
ಇದನ್ನೂ ಓದಿ: ಪಿಪಿಇ ಕಿಟ್ ಧರಿಸಿ ಓಡಾಡುತ್ತಿರುವ ಬಾಲಿವುಡ್ ನಟಿ ರಾಖಿ ಸಾವಂತ್
ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿದ್ದ ನಟ ಅಕ್ಷಯ್ ಕುಮಾರ್ ಏಪ್ರಿಲ್ 4ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ಚೇತರಿಸಿಕೊಂಡಿದ್ದ ಅವರು ಡಿಸ್ಚಾರ್ಜ್ ಆದರು.