ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಅಂಜಲಿ ಪಾತ್ರಧಾರಿ ಮೂರನೇ ಬಾರಿಗೆ ಬದಲಾಗುತ್ತಿದ್ದಾರೆ.
ಅಂಜಲಿಯಾಗಿ ನಟಿಸುತ್ತಿರುವ ದೀಪಾ ಜಗದೀಶ್ ಕಾವ್ಯಾಂಜಲಿ ಧಾರಾವಾಹಿಯಿಂದ ಹೊರ ಬರುತ್ತಿರುವ ವಿಚಾರ ತಿಳಿದಿರುವುದೇ. ಇದೀಗ ಆ ಪಾತ್ರಕ್ಕೆ ಮತ್ತೋರ್ವ ನಟಿ ಎಂಟ್ರಿ ಆಗುತ್ತಿದ್ದಾರೆ. ಅವರೇ ಅಕ್ಷತಾ ದೇಶಪಾಂಡೆ.
![Akshata Deshpande](https://etvbharatimages.akamaized.net/etvbharat/prod-images/12008416_fgnmd.jpg)
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮತ್ತೆ ವಸಂತ ಧಾರಾವಾಹಿಯಲ್ಲಿ ನಾಯಕಿ ಅಪರ್ಣಾ ಆಗಿ ನಟಿಸುತ್ತಿರುವ ಅಕ್ಷತಾ ದೇಶಪಾಂಡೆ ಇನ್ನು ಮುಂದೆ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಅಂಜಲಿಯಾಗಿ ಮನರಂಜನೆ ನೀಡಲಿದ್ದಾರೆ.
ಇದನ್ನೂ ಓದಿ: ನಟಿಯಿಂದ ಮೆಂಟರ್ ಆಗಿ ಬದಲಾದ ರಶ್ಮಿ ಪ್ರಭಾಕರ್!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಮೊದಲ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ಮಿಂಚಿ ಅತಿ ಹೆಚ್ಚಿನ ಪ್ರೇಕ್ಷಕರ ಮನ ಗೆದ್ದಿದ್ದರು. ಅಮೃತವರ್ಷಿಣಿ ಧಾರಾವಾಹಿಯಲ್ಲಿ ಅಮೃತ ಹಾಗೂ ವರ್ಷ ಎಂಬ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಕ್ಷತಾ ಇನ್ನು ಮುಂದೆ ಅಂಜಲಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಲಿದ್ದಾರೆ.