ಪ್ರಪಂಚದಲ್ಲಿ ಟಿಕ್ ಟಾಕ್ ಆ್ಯಪ್ ತನ್ನ ಭದ್ರ ಬಾಹುಗಳನ್ನು ಚಾಚುತ್ತಲೇ ಹೋಗಿದೆ. ಇದಕ್ಕೆ ಚಿತ್ರ ನಟ- ನಟಿಯರೂ ಹೊರತಾಗಿಲ್ಲ. ಈ ಹಿಂದೆ ಕನ್ನಡದ ಹಲವು ನಟಿಯರು ಟಿಕ್ ಟಾಕ್ ಮಾಡಿ ಗಮನ ಸೆಳೆದಿದ್ರು. ಸದ್ಯ ಐಂದ್ರಿತಾ ರೈ ಟಿಕ್ಟಾಕ್ನಲ್ಲಿ ಸೊಂಟ ಬಳುಕಿಸಿ ಸುದ್ದಿಯಾಗಿದ್ದಾರೆ.
ಹೌದು ಮೊದಲ ಬಾರಿಗೆ ಟಿಕ್ಟಾಕ್ನಲ್ಲಿ ಕಾಣಿಸಿಕೊಂಡಿರುವ ದಿಂಗಂತ್ ಮನದನ್ನೆ, ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿ ಟಿಕ್ ಟಾಕ್ ಮಾಡಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದಾರೆ. ಈ ವಿಡಿಯೋಕ್ಕೆ ಕ್ಯಾಪ್ಶನ್ ಬರೆದಿದ್ದು ಬನ್ನಿ ಎಲ್ಲರೂ ಸೇರಿ ಸಿಲ್ಲಿ ಕೆಲಸ ಮಾಡೋಣ ಎಂದಿದ್ದಾರೆ.
- View this post on Instagram
Finally on TikTok come groove with me on #tiktok n let’s get silly together 🤪 #followmeontiktok
">
ದಿಗಂತ್ ಜೊತೆ ಮದುವೆಯಾದ ಮೇಲೆ ಕೊಂಚ ಸಿನಿಮಾ ಕೆಲಸಗಳಿಂದ ದೂರ ಉಳಿದಿರುವ ಜಂಗ್ಲಿ ಬೆಡಗಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಲಿರುವ ದಿ ಕ್ಯಾಸಿನೋ ಎಂಬ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ.