ಮಾಲಿವುಡ್ ನಟ ದುಲ್ಕರ್ ಸಲ್ಮಾನ್ಗೆ ಕೋವಿಡ್ ಸೋಂಕು ತಗುಲಿದ್ದು, ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಿರಿಯ ನಟ ಮಮ್ಮುಟ್ಟಿಗೂ ಕೋವಿಡ್ ದೃಢಪಟ್ಟಿತ್ತು.
ನನ್ನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ನಾನು ಮನೆಯಲ್ಲಿ ಪ್ರತ್ಯೇಕವಾಗಿದ್ದೇನೆ. ಸ್ವಲ್ಪ ಜ್ವರ ಮತ್ತು ಸೋಂಕಿನ ಲಕ್ಷಣಗಳನ್ನು ಹೊಂದಿದ್ದೇನೆ. ಕಳೆದ ಕೆಲವು ದಿನಗಳಿಂದ ಚಿತ್ರೀಕರಣದ ಸಮಯದಲ್ಲಿ ನನ್ನೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿದ್ದವರು, ಸೋಂಕು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ದುಲ್ಕರ್ ಸಲ್ಮಾನ್ ಟ್ವಿಟರ್ನಲ್ಲಿ ಮನವಿ ಮಾಡಿದ್ದಾರೆ.
-
Positive. pic.twitter.com/cv3OkQXybs
— Dulquer Salmaan (@dulQuer) January 20, 2022 " class="align-text-top noRightClick twitterSection" data="
">Positive. pic.twitter.com/cv3OkQXybs
— Dulquer Salmaan (@dulQuer) January 20, 2022Positive. pic.twitter.com/cv3OkQXybs
— Dulquer Salmaan (@dulQuer) January 20, 2022
ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟ್ಟಿಗೂ ಜನವರಿ 16ರಂದು ಕೋವಿಡ್ ದೃಢಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ ಸೋಂಕು ತಗುಲಿರುವುದಾಗಿ ಹೇಳಿಕೊಂಡಿದ್ದರು. 70 ವರ್ಷ ವಯಸ್ಸಿನ ಮಮ್ಮುಟಿ ಈಗ ಸದ್ಯಕ್ಕೆ ಸಿಬಿಐ 5 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ