ಸೂಪರ್ ಸ್ಟಾರ್ ಮಹೇಶ್ ಬಾಬು ಸದ್ಯಕ್ಕೆ ತಮ್ಮ 25ನೇ ಸಿನಿಮಾ 'ಮಹರ್ಷಿ' ಪ್ರಮೋಶನ್ನಲ್ಲಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಸಿನಿಮಾ ಮೇ 9ರಂದು ಬಿಡುಗಡೆಯಾಗಲಿದೆ.
ಇನ್ನು ಮಹರ್ಷಿ ಬಿಡುಗಡೆ ನಂತರ ಮಹೇಶ್ ಬಾಬು ತಮ್ಮ ಮುಂದಿನ ಸಿನಿಮಾಗೆ ತಯಾರಾಗಲಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದ ಈ ಸಿನಿಮಾ ಶೂಟಿಂಗ್ ಜೂನ್ ತಿಂಗಳಲ್ಲಿ ಆರಂಭವಾಗಲಿದೆ. ರಾಯಲಸೀಮೆ ಹಿನ್ನೆಲೆ ಕಥೆಯನ್ನು ಹೊಂದಿರುವ ಸಿನಿಮಾದಲ್ಲಿ ಮಹೇಶ್ ಬಾಬು ಅಜಯ್ ಜೋಸೆಫ್ ಎಂಬ ಪಾತ್ರದಲ್ಲಿ ನಟಿಸಲಿದ್ದಾರೆ. 'ಒಕ್ಕಡು' ಸಿನಿಮಾದಲ್ಲಿ ಕೂಡಾ ಮಹೇಶ್ ಬಾಬು ಇದೇ ಹೆಸರಿನ ಪಾತ್ರ ಮಾಡಿದ್ದರು.
ಸದ್ಯಕ್ಕೆ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಹಾಗೂ ಚಿತ್ರತಂಡ ಕರ್ನೂಲ್ ಹಾಗೂ ಸುತ್ತಮುತ್ತ ಲೊಕೇಶನ್ ಹುಡುಕಾಟದಲ್ಲಿದೆ. ಅನಿಲ್ ಸುಂಕುರ ಹಾಗೂ ದಿಲ್ ರಾಜು ನಿರ್ಮಾನದ ಸಿನಿಮಾಗೆ 'ಸರಿಲೇಲು ನೀಕೆವರು' ಎಂಬ ಹೆಸರಿಟ್ಟಿದ್ದು ಸಿನಿಮಾ ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಲಿದೆ ಎನ್ನಲಾಗುತ್ತಿದೆ.