ETV Bharat / sitara

'ಏಕ್​ ವಿಲನ್'​ಆದ ಆದಿತ್ಯ ರಾಯ್​ ಕಪೂರ್.. ಕೊರೊನಾ ಕಾಟಕ್ಕೆ ವಿಡಿಯೋ ಕಾಲ್​ನಲ್ಲಿಯೇ ಚರ್ಚೆ.. - Mohit Suri

ಆದಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು, ತುಂಬಾ ಖುಷಿಯಾಗುತ್ತಿದೆ ಅಂತಾ ನಿರ್ದೇಶಕ ಮೋಹಿತ್​ ಸೂರಿ ಹೇಳಿಕೊಂಡಿದ್ದಾರೆ.

aditya-roy-kapoor-prepares-for-ek-villain-sequel-over-video-calls
ಆದಿತ್ಯ ರಾಯ್​ ಕಪೂರ್
author img

By

Published : Mar 31, 2020, 5:12 PM IST

ಮುಂಬೈ : ಇಷ್ಟು ದಿನ ಲವರ್​ ಬಾಯ್​ ಆಗಿ ಬಿಟೌನ್​ನಲ್ಲಿ ಮೋಡಿ ಮಾಡಿದ್ದ ಆದಿತ್ಯ ರಾಯ್​ ಕಪೂರ್​​ ಸದ್ಯ ಅಭಿಮಾನಿಗಳಿಗೆ 'ಏಕ್​ ವಿಲನ್​' ಆಗಲು ಹೊರಟಿದ್ದಾರೆ. 'ಆಶಿಕಿ -2' ನಂತರ ಮತ್ತೆ ನಟ ಆದಿತ್ಯ ರಾಯ್​ ಕಪೂರ್​ ಮತ್ತು ನಿರ್ದೇಶಕ ಮೋಹಿತ್​ ಸೂರಿ ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. 'ಏಕ್​ ವಿಲನ್'​ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ವಿಡಿಯೋ ಕಾಲ್​ ಮೂಲಕ ಚಿತ್ರದ ಕುರಿತು ಮಾತುಕತೆ ನಡೆಸಿದ್ದಾರಂತೆ.

ತನಗೆ ಆದಿಯೊಂದಿಗೆ ಕೆಲಸ ಮಾಡೋದು ಅಂದ್ರೆ ತುಂಬಾ ಇಷ್ಟ. ಪ್ರತಿಸಲ ಅವರಿಗೆ ಉತ್ತಮವಾದುದನ್ನ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಆದಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು, ತುಂಬಾ ಖುಷಿಯಾಗುತ್ತಿದೆ ಅಂತಾ ನಿರ್ದೇಶಕ ಮೋಹಿತ್​ ಸೂರಿ ಹೇಳಿಕೊಂಡಿದ್ದಾರೆ.

ಕೆಲದಿನಗಳ ಹಿಂದೆ ಮೋಹಿತ್​ ಮತ್ತು ಆದಿ ಈ ಕುರಿತು ಚರ್ಚೆ ಮಾಡಿದ್ದರು. ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾದ ಹಿನ್ನೆಲೆ ದೇಶ ಲಾಕ್‌​ಡೌನ್ ಆಗಿದೆ. ಚಿತ್ರದ ಪಾತ್ರ ಮತ್ತು ಕಥಾವಸ್ತುವಿನ ಕುರಿತು ಪ್ರತಿದಿನ ವಿಡಿಯೋ ಕಾಲ್​ ಮೂಲಕ ಚರ್ಚೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳುದು ಬಂದಿದೆ.ಚಿತ್ರದಲ್ಲಿ ಜಾನ್​ ಅಬ್ರಾಹಂ, ದಿಶಾ ಪಟಾನಿ ಮತ್ತು ತಾರಾ ಸುತಾರಿಯಾ ನಟಿಸುತ್ತಿದ್ದಾರೆ. ಅಲ್ಲದೆ ಏಕ್ತಾ

ಕಪೂರ್​ ಮತ್ತು ಭೂಷನ್​ ಕುಮಾರ್ ಸಹ ಭಾಗಿತ್ವದಲ್ಲಿ ಚಿತ್ರ ನಿರ್ಮಾಣವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.