ETV Bharat / sitara

ಅದಿತಿ ರಾವ್​ ಮಲಯಾಳಂ ಸಿನಿಮಾ ರಿಲೀಸ್​.. ಥಿಯೇಟರ್​​​ನಲ್ಲಾ? - ಮುಂಬೈ

ಅದಿತಿ ರಾವ್​ ಹೈದರಿ ಅಭಿನಯದ ಮಲಯಾಳಂ ಸಿನಿಮಾ 'ಸೂಫಿಯುಂ ಸುಜಾತಯುಂ' ಸಿನಿಮಾ ಜುಲೈ 3 ರಂದು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಲಿದೆ.

ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​
ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​
author img

By

Published : Jun 23, 2020, 1:08 PM IST

ಮುಂಬೈ: ಬಹುಭಾಷಾ ನಟಿ ಅದಿತಿ ರಾವ್​ ಹೈದರಿ ಅಭಿನಯದ ಮಲಯಾಳಂ ಸಿನಿಮಾ 'ಸೂಫಿಯುಂ ಸುಜಾತಯುಂ' ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ನೇರವಾಗಿ ಜುಲೈ 3ರಂದು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಲಿದೆ.

ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ನಟಿ, "ಒಟಿಟಿ ಮೂಲಕ ಮೊದಲ ಮಲಯಾಳಂ ಚಿತ್ರ 'ಸೂಫಿಯುಂ ಸುಜಾತಯುಂ' ಜುಲೈ 3ರಂದು ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ" ಎಂದು ಹೇಳಿದ್ದಾರೆ. ಈ ವೇಳೆ, ಚಿತ್ರದ ನಟ, ನಿರ್ದೇಶಕರನ್ನು ಟ್ಯಾಗ್​ ಮಾಡಿದ್ದಾರೆ.

14 ವರ್ಷಗಳ ಬಳಿಕ ಅದಿತಿ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ದಕ್ಷಿಣ ಭಾರತದ ಸೂಪರ್​ಸ್ಟಾರ್​ ಜಯಸೂರ್ಯ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಸಿನಿಮಾಟೊಗ್ರಾಫರ್​ ಅನು ಮೂತೇದತ್ ಚಿತ್ರೀಕರಿಸಿದ್ದು, ದೀಪು ಜೋಸೆಫ್ ಸಂಕಲನ ಮಾಡಿದ್ದಾರೆ. ಇನ್ನು ಚಿತ್ರಕ್ಕೆ ಹರಿನಾರಾಯಣ್​ ಸಾಹಿತ್ಯ ಬರೆದಿದ್ದು, ಎಂ. ಜಯಚಂದ್ರನ್​ ಸಂಗೀತ ಸಂಯೋಜಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.