ETV Bharat / sitara

ಸದ್ದು ಮಾಡುತ್ತಿದೆ ಅದಿತಿ ಪ್ರಭುದೇವ ನಟನೆಯ 'ಆನ' ಚಿತ್ರದ ಟೀಸರ್ - ಅದಿತಿ ಪ್ರಭುದೇವ 'ಆನ' ಚಿತ್ರದ ಟೀಸರ್

ಸ್ಯಾಂಡಲ್​ವುಡ್​ನಲ್ಲಿ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ 'ಆನ'‌ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಅದಿತಿ ಪ್ರಭುದೇವ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಚಿತ್ರದ ಟೀಸರ್​ ಎಲ್ಲೆಡೆ ಸಖತ್​ ಸದ್ದು ಮಾಡುತ್ತಿದೆ.

Aana Movie teaser out
'ಆನ' ಚಿತ್ರದ ಟೀಸರ್
author img

By

Published : Mar 25, 2021, 12:40 PM IST

ಅದಿತಿ ಪ್ರಭುದೇವ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಹಾಗೂ ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ 'ಆನ'‌ ಚಿತ್ರದ ಟೀಸರ್ ಬಿಡುಗಡೆ ಆಗಿ, ಆನಂದ್ ಆಡಿಯೋ ಯೂಟ್ಯೂಬ್​ನಲ್ಲಿ ಸಖತ್ ಸದ್ದು ಮಾಡುತ್ತಿದೆ.

  • " class="align-text-top noRightClick twitterSection" data="">

ಟೀಸರ್ ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ ಅಧಿಕ‌ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಟೀಸರ್​ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದಿತಿ ಪ್ರಭುದೇವ ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ನಿರ್ವಹಣೆ ಮಾಡಿದ್ದಾರೆ. ಅದಿತಿ ಪ್ರಭುದೇವ ಅಲ್ಲದೇ ಸುನಿಲ್ ಪುರಾಣಿಕ್, ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಶ್ ಉತ್ತಯ್ಯ, ಪ್ರೇರಣಾ ಕಂಬಂಮ್, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಇದನ್ನು ಓದಿ: 'The Sound of Chaos​' ರಿಲೀಸ್​: ಸಿನಿಪ್ರಿಯರಿಗೆ ಸನಿಹವಾದ 'ನಿನ್ನ ಸನಿಹಕೆ' ಹಾಡು

ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮನೋಜ್ ಪಿ ನಡುಲುಮನೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಹಲವು ಕಿರು ಹಾಗೂ ಟೆಲಿ ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಮನೋಜ್ ಅವರಿಗೆ ಹಿರಿತೆರೆಯಲ್ಲಿ ಇದು ಮೊದಲ ನಿರ್ದೇಶನದ ಚಿತ್ರ. ಯು.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಅವರ ಸಂಗೀತ ನಿರ್ದೇಶನವಿರುವ ಆನ ಸಿನಿಮಾಗೆ ವಿಜೇತ್ ಚಂದ್ರ ಅವರ ಸಂಕಲನವಿದೆ ಸದ್ಯ ಟೀಸರ್​ನಿಂದ ಗಮನ ಸೆಳೆಯುತ್ತಿರೋ ಆನ ಸದ್ಯದಲ್ಲೇ ತೆರೆಗೆ ಬರುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.