ETV Bharat / sitara

ಅದಿತಿ ಪ್ರಭುದೇವ ಈಗ ಫೀಮೇಲ್ ಸೂಪರ್ ಹೀರೋ - Manoj p Nadumane direction film

ಮನೋಜ್ ಪಿ ನಡುಮನೆ ನಿರ್ದೇಶನದಲ್ಲಿ ಅದಿತಿ ಪ್ರಭುದೇವ ನಟಿಸುತ್ತಿರುವ ಫೀಮೇಲ್ ಸೂಪರ್ ಹೀರೋ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಇದು ಹಾರರ್​-ಫ್ಯಾಂಟಸಿ ಚಿತ್ರ ಎನ್ನಲಾಗಿದೆ.

Female Super hero now
ಅದಿತಿ ಪ್ರಭುದೇವ
author img

By

Published : Oct 9, 2020, 10:49 AM IST

ಕಿರುತೆರೆ ಮೂಲಕ ಕರಿಯರ್ ಆರಂಭಿಸಿ ಈಗ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಅದಿತಿ ಪ್ರಭುದೇವ ಅವರಿಗೆ ಅನೇಕ ಅವಕಾಶಗಳು ಹುಡುಕಿ ಬರುತ್ತಿವೆ. ಸ್ಯಾಂಡಲ್​​ವುಡ್​​ನಲ್ಲಿ ರಚಿತಾ ರಾಮ್​​ ನಂತರ ಹೆಚ್ಚು ಬ್ಯುಸಿ ನಟಿ ಎಂದರೆ ಅದಿತಿ ಪ್ರಭುದೇವ.

ಅದಿತಿ ನಟಿಸುತ್ತಿರುವ 'ಓಲ್ಡ್ ಮಾಂಕ್'​ ಚಿತ್ರದ ವಿಶೇಷ ಹಾಡೊಂದು ಇಂದು ಬಿಡುಗಡೆ ಆಗುತ್ತಿದೆ. 'ಚಾಂಪಿಯನ್' ಹಾಗೂ 'ಗಜಾನನ ಅ್ಯಂಡ್ ಗ್ಯಾಂಗ್'​ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಇದರೊಂದಿಗೆ ಅವರು ಅಭಿನಯಿಸಿರುವ 'ಪರ್ಫೆಕ್ಟ್ ಗರ್ಲ್' ಎಂಬ ಒಂದು ವಿಡಿಯೋ ಹಾಡು ಕೂಡಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರಗಳ ನಡುವೆ ಮನೋಜ್ ಪಿ ನಡುಮನೆ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಫೀಮೇಲ್ ಸೂಪರ್ ಹೀರೋ' ಚಿತ್ರದಲ್ಲಿ ಕೂಡಾ ಅದಿತಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಚಿತ್ರೀಕರಣ ಮುಗಿದಿದ್ದು ಕ್ಲೈಮ್ಯಾಕ್ಸ್​ ಚಿತ್ರೀಕರಣ ಬಾಕಿ ಇದೆ. ಅಕ್ಟೋಬರ್ 24 ರಂದು ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್​ ಲುಕ್ ಬಿಡುಗಡೆ ಆಗಲಿದೆ.

ಚಿತ್ರದಲ್ಲಿ ಸುನಿಲ್ ಪುರಾಣಿಕ್, ಪ್ರೇರಣ ಕಂಬಮ್, ಚೇತನ್ ಗಂಧರ್ವ, ಸಮರ್ಥ ನರಸಿಂಹರಾಜು ಅಭಿನಯಿಸಿದ್ದಾರೆ. ಪೂಜಾ ವಸಂತ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಆ್ಯಕ್ಷನ್ ಹಾಗೂ ಫ್ಯಾಂಟಸಿ ಕಥೆ ಇದೆಯಂತೆ. ಈ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿದ್ದು ವಿಭಿನ್ನ ಪ್ರಯೋಗ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.