ETV Bharat / sitara

ಮೌಢ್ಯತೆ ವಿರೋಧಿಸುತ್ತಿದ್ದ ಸಾಮಾಜಿಕ ಪ್ರಜ್ಞೆಯ ಹಾಸ್ಯನಟ.. ಪರಿಸರ ಉಳಿಸಬೇಕೆನ್ನುವ 'ವಿವೇಕ' ಸದಾ ಜಾಗೃತ.. - ನಟ ವಿವೇಕ್

ಚಲನಚಿತ್ರಗಳ ಮೂಲಕ ಸಾಮಾಜಿಕವಾಗಿ ಪ್ರಜ್ಞಾಪೂರ್ವಕ ಸಂದೇಶಗಳನ್ನು ಪ್ರಸಾರ ಮಾಡುವುದರ ಹೊರತಾಗಿ, ವಿವೇಕ್ ಅವರು ಖಾಸಗಿ ಜೀವನದಲ್ಲೂ ಸಾಮಾಜಿಕ ಪ್ರಜ್ಞೆಯ ಪ್ರಜೆಯಾಗಿದ್ದರು. ಮಾಜಿ ಅಧ್ಯಕ್ಷ ಎಪಿಜೆ ಅಬ್ದುಲ್ ಕಲಾಂ ಅವರಿಮದ ಪ್ರೇರೇಪಿತರಾದ ಅವರು, ಒಂದು ಕೋಟಿ ಸಸಿಗಳನ್ನು ನೆಡುವ ಉನ್ನತ ಗುರಿ ಹೊಂದಿದ್ದರು..

plant
plant
author img

By

Published : Apr 17, 2021, 4:45 PM IST

Updated : Apr 17, 2021, 6:39 PM IST

ಹೈದರಾಬಾದ್ : ತಮಿಳು ನಟ ವಿವೇಕ್ ಹೃದಯ ಸ್ತಂಭನದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಮುಂಜಾನೆ 4.35ಕ್ಕೆ ಚೆನ್ನೈನ ವಡಪಲೈನ್ ಸಿಮ್ಸ್ ಆಸ್ಪತ್ರೆಯಲ್ಲಿ ಇಸಿಎಂಒ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದ ಆಘಾತಕಾರಿ ಸಂಗತಿ.

ಹಲವಾರು ನಾಯಕರು, ನಟರು, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ವಿವೇಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ವಿವೇಕ್ ಗುರುವಾರ ತೆಗೆದುಕೊಂಡ ಕೊರೊನಾ ವ್ಯಾಕ್ಸಿನೇಷನ್ ಮತ್ತು ಹೃದಯ ಸ್ತಂಭನದಿಂದಾಗಿ ಅವರು ಸಾವನ್ನಪ್ಪಿದರ ನಡುವಿನ ಸಂಬಂಧದ ವದಂತಿಗಳು ಹರಿದಾಡುತ್ತಿದ್ದವು. ಈ ಕುರಿತು ಪತ್ತೆಹಚ್ಚಿದ ವೈದ್ಯರು, ವ್ಯಾಕ್ಸಿನೇಷನ್​ಗೂ ಅವರ ಸಾವಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

Adieu Vivek, a socially conscious comedian!
ವಿವೇಕ್ ಅವರಿಗೆ​ ಶ್ರದ್ಧಾಂಜಲಿ

ರಜನೀಕಾಂತ್ ಟ್ವೀಟ್

ವಿವೇಕ್ ಅವರಿಗೆ ಶ್ರದ್ಧಾಂಜಲಿ

ವಿವೇಕ್ ಅವರ ಸಿನಿಮಾ ಪರಂಪರೆ : 1980ರ ದಶಕದಲ್ಲಿ ಚಲನಚಿತ್ರ ವೃತ್ತಿಜೀವನ ಪ್ರಾರಂಭಿಸಿದ ವಿವೇಕ್, ತಮ್ಮ ಚಿತ್ರಗಳಲ್ಲಿ ವಿನೋದ, ವಿಡಂಬನೆ ಮತ್ತು ಹಾಸ್ಯದ ಮೂಲಕ ಜನರ ಮೂಢನಂಬಿಕೆಗಳನ್ನು ಖಂಡಿಸಿದರು. ಅವರನ್ನು 'ಚಿನ್ನ ಕಲೈವಾನಾರ್' (ಕಲೆಗಳಲ್ಲಿ ಮಿನಿ ಪರಿಣಿತ) ಎಂದೂ ಪ್ರಶಂಸಿಸಲಾಯಿತು. (ತಮಿಳಿನ ಖ್ಯಾತ ಹಾಸ್ಯನಟ ಎನ್.ಎಸ್.ಕೃಷ್ಣ ಅವರನ್ನು 'ಕಲೈವಾನಾರ್' (ಕಲೆಗಳಲ್ಲಿ ಪರಿಣಿತ) ಎಂದು ಕರೆಯಲಾಗುತ್ತಿತ್ತು.)

ಚಿತ್ರದ ದೃಶ್ಯವೊಂದರಲ್ಲಿ ವಿವೇಕ್

ಉದಾಹರಣೆಗೆ 'ಸಾಮಿ' (2003) ಚಿತ್ರದ ಒಂದು ದೃಶ್ಯದಲ್ಲಿ ವಿವೇಕ್ ಎಸ್‌ಸಿ ಜಾತಿಗೆ ಸೇರಿದ ಮಗುವನ್ನು ತಲೆಯ ಮೇಲೆ ಹೊತ್ತುಕೊಂಡು ತನ್ನ ಮನೆಗೆ ಪ್ರವೇಶಿಸುತ್ತಾರೆ. ಹಲವಾರು ಮಕ್ಕಳನ್ನು ಮನೆಗೆ ಕರೆತರುವ ಅವರು ಮಹಾನ್ ತಮಿಳು ಕವಿ ಭಾರತಿಯಾರ್ ಅವರ "ಬಿಳಿ ಬೆಕ್ಕು ಮನೆಯಲ್ಲಿ ಬೆಳೆಯುತ್ತದೆ" ಎಂಬ ಹಾಡನ್ನು ಹಾಡುತ್ತಾ ಬರುತ್ತಾರೆ. ಈ ಮಕ್ಕಳು ಯಾರು ಎಂದು ಅವರ ಹೆಂಡತಿ ಪಾತ್ರಧಾರಿ ಕೇಳುತ್ತಾರೆ. ಅದಕ್ಕೆ ಉತ್ತರಿಸುವ ಅವರು, "ಈ ಮಕ್ಕಳು ಸಾಕಷ್ಟು ದಣಿದಿದ್ದಾರೆ ಮತ್ತು ಹಸಿದಿದ್ದಾರೆ, ಅವರಿಗೆ ಆಹಾರ ನೀಡು" ಎನ್ನುತ್ತಾರೆ.

ಅವರ ಪತ್ನಿ ಆಹಾರ ನೀಡಲು ನಿರಾಕರಿಸಿ, ಅದು ಸಾಮಾಜಿಕ ನೈತಿಕ ಸಂಹಿತೆಗೆ ವಿರುದ್ಧವಾಗಿದೆ ಎಂದು ಹೇಳುವಾಗ, ವಿವೇಕ್ ಮನೆಯೆ ಹೊರಗೆ ವೃದ್ಧರೊಬ್ಬರು ಪಿತೃಗಳಿಗೆ ಅಹಾರ ನೀಡಲು ಕಾಗೆಗಳನ್ನು ಕರೆಯುವುದನ್ನು ನೋಡುತ್ತಾನೆ.

ಅದನ್ನು ನೋಡಿದ ವಿವೇಕ್ "ನೀವು ನಿಮ್ಮ ಪೂರ್ವಜರೆಂದು ನಂಬಿ ಕಾಗೆಗಳನ್ನು ಕರೆದು ಆಹಾರ ನೀಡುತ್ತೀರಿ. ಆದರೆ, ನೀವು ಜೀವಂತ ಮಕ್ಕಳಿಗೆ ಆಹಾರ ನೀಡುವುದಿಲ್ಲ" ಎಂದು ಹೇಳಿ ಪ್ರೇಕ್ಷಕರಿಗೆ ಹಾಸ್ಯದ ಮೂಲಕ ತರ್ಕ ಬದ್ಧವಾದ ಸಂದೇಶ ನೀಡುತ್ತಾರೆ. 'ತಿರುಮಲೈ'ನಂತಹ ಚಿತ್ರಗಳಲ್ಲಿ ವಿವೇಕ್ ಚೆನ್ನೈ ಕಾರ್ಪೊರೇಶನ್‌ನಂತಹ ಸರ್ಕಾರಿ ಸಂಸ್ಥೆಗಳನ್ನು ವಿಡಂಬಿಸುವು ಡೈಲಾಗ್ ನೀಡಿದ್ದಾರೆ.

ನಟ ವಿವೇಕ್

ಮಧುರೈನ ಮಣ್ಣಿನ ಮಗ : ನವೆಂಬರ್ 19, 1961ರಂದು ಮಧುರೈನ ಅಂಗೈಯಾ ಪಾಂಡಿಯನ್ ಮತ್ತು ಮಣಿಯಮ್ಮಲ್ ದಂಪತಿಗೆ ಜನಿಸಿದ ವಿವೇಕ್ ಅವರ ಪೂರ್ವಜರ ಊರು ಕೋವಿಲ್ಪಟ್ಟಿಯ ಇಲುಪ್ಪೈಯೂರಾನಿ. ಅವರು 1987ರಲ್ಲಿ ಕೆ.ಬಾಲಚಂದರ್ ಅವರ 'ಮನತಿಲ್ ಉರುತಿ ವಂದಮ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ವಿವೇಕ್ 2020ರಲ್ಲಿ ತಮ್ಮ ಕೊನೆಯ ಚಿತ್ರ 'ತಾರಾಲ ಪಿರಾಭು'ನಲ್ಲಿ ನಟಿಸಿದ್ದರು. ಅವರ ಇತರ ಜನಪ್ರಿಯ ಚಿತ್ರಗಳೆಂದರೆ 'ಪುತು ಪುತ್ತು ಅರ್ಥಂಗಲ್, 'ಮಿನ್ನಲೇ', 'ಪೆನ್ನಿನ್ ಮನಥೈ ತೊಟ್ಟು, 'ಥೂಲ್' ಮತ್ತು 'ನಮ್ಮ ವೀತು ಕಲ್ಯಾಣಂ'.

ಕರುಣಾನಿಧಿಯೊಂದಿಗೆ ವಿವೇಕ್

ಸಾಮಾಜಿಕ ಪ್ರಜ್ಞೆಯ ನಟ : ಚಲನಚಿತ್ರಗಳ ಮೂಲಕ ಸಾಮಾಜಿಕವಾಗಿ ಪ್ರಜ್ಞಾಪೂರ್ವಕ ಸಂದೇಶಗಳನ್ನು ಪ್ರಸಾರ ಮಾಡುವುದರ ಹೊರತಾಗಿ, ವಿವೇಕ್ ಅವರು ಖಾಸಗಿ ಜೀವನದಲ್ಲೂ ಸಾಮಾಜಿಕ ಪ್ರಜ್ಞೆಯ ಪ್ರಜೆಯಾಗಿದ್ದರು. ಮಾಜಿ ಅಧ್ಯಕ್ಷ ಎಪಿಜೆ ಅಬ್ದುಲ್ ಕಲಾಂ ಅವರಿಮದ ಪ್ರೇರೇಪಿತರಾದ ಅವರು, ಒಂದು ಕೋಟಿ ಸಸಿಗಳನ್ನು ನೆಡುವ ಉನ್ನತ ಗುರಿ ಹೊಂದಿದ್ದರು. ಈ ಅಭಿಯಾನಕ್ಕೆ 'ಪಸುಮೈ ಕಲಾಂ ತಿಟ್ಟಂ' (ಹಸಿರು ಕಲಾಂ ಯೋಜನೆ) ಎಂದು ಹೆಸರಿಟ್ಟು ಅದರ ಅಡಿಯಲ್ಲಿ ಸಸಿಗಳನ್ನು ನೆಡುವುದರೊಂದಿಗೆ ಪರಿಸರಕ್ಕೆ ಕೊಡುಗೆ ನೀಡುವ ಗುರಿ ಹೊಂದಿದ್ದರು.

ಕಲಾಂರಿಂದ ಪ್ರೇರೇಪಿತರಾಗಿದ್ದ ನಟ ವಿವೇಕ್

ಗಿಡ ನೆಡುವ ಅಭಿಯಾನ

ತನ್ನ ಮಗನ ಅಕಾಲಿಕ ನಿಧನದ ಬಳಿಕ ಅವರು ಆಧ್ಯಾತ್ಮಿಕತೆಯತ್ತ ಗಮನಹರಿಸಲು ಪ್ರಾರಂಭಿಸಿದ್ದರು ಮತ್ತು ಸ್ವಾಮಿ ವಿವೇಕಾನಂದರ ಕೃತಿಗಳನ್ನು ಹೆಚ್ಚಾಗಿ ಓದುತ್ತಿದ್ದರು. ವಿವೇಕ್ ಇಹಲೋಕ ತ್ಯಜಿಸಿದ್ದರೂ, ಅವರ ವಿಡಂಬನಾತ್ಮಕ ಹಾಗೂ ಪ್ರಗತಿಪರ ಸಂದೇಶಗಳು ಶಾಶ್ವತವಾಗಿ ನೆನಪಿನಲ್ಲಿರಲಿವೆ.

Last Updated : Apr 17, 2021, 6:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.