ಡಾ. ರಾಜಕುಮಾರ್, ಅಂಬರೀಶ್ ಬಳಿಕ ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಂಡಿರುವ ನಟ ಶಿವರಾಜ್ ಕುಮಾರ್ ಅವರನ್ನು ಎಡಿಜಿಪಿ ಭಾಸ್ಕರ್ ರಾವ್ ಭೇಟಿ ಮಾಡಿದ್ರು. ಕೆಲವು ದಿನಗಳ ಹಿಂದೆಯಷ್ಟೇ ಡಿಸಿಎಂ ಅಶ್ವತ್ಥನಾರಾಯಣ್ ಅವ್ರನ್ನ ಶಿವರಾಜ್ ಕುಮಾರ್ ಭೇಟಿ ಮಾಡಿ ಕನ್ನಡ ಚಿತ್ರರಂಗದ ಬೆಳವಣಿಗೆ ಬಗ್ಗೆ ಮಾತನಾಡಿದ್ರು.
ಈಗ ಕರುನಾಡ ಚಕ್ರವರ್ತಿ ಮನೆಗೆ, ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿಯಾಗಿದೆ. ಕನ್ನಡ ಚಿತ್ರರಂಗದ ನಾಯಕತ್ವವನ್ನ ಶಿವರಾಜ್ ಕುಮಾರ್ ವಹಿಸಿಕೊಂಡಿರುವ ಹಿನ್ನೆಲೆ ಅವರಿಗೆ ಅಭಿನಂದನೆ ಸಲ್ಲಿಸಿದ್ರು. ನಾಗವಾರದ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿರುವ ಭಾಸ್ಕರ್ ರಾವ್, ಹ್ಯಾಟ್ರಿಕ್ ಹೀರೋ ಜೊತೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ಮಾಡಿದ್ದಾರೆ.
ರಾಜಕುಮಾರ್ ಕುಟುಂಬದ ಜೊತೆ ಒಳ್ಳೆ ಬಾಂಧವ್ಯ ಹೊಂದಿರುವ ಭಾಸ್ಕರ್ ರಾವ್, ಈಗ ಶಿವರಾಜ್ ಕುಮಾರ್ ಜೊತೆ ಕೂಡ ಸ್ನೇಹ- ಬಾಂಧವ್ಯ ಇಟ್ಟುಕೊಂಡಿದ್ದಾರೆ. ಭಾಸ್ಕರ್ ರಾವ್ ಅವರು ಶಿವರಾಜ್ ಕುಮಾರ್ ಜೊತೆ ಚಿತ್ರರಂಗದ ಬೆಳವಣಿಗೆ ಬಗ್ಗೆ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಹಾಗೆ ಶಿವರಾಜ್ ಕುಮಾರ್ ಕೂಡ ಭಾಸ್ಕರ್ ರಾವ್ ಅವರ ಹೊಸ ಜವಾಬ್ದಾರಿ ಬಗ್ಗೆ ಚರ್ಚೆ ಮಾಡಿದ್ದಾರಂತೆ.