ETV Bharat / sitara

ನನಗೆ ಕೃತಜ್ಞತೆ ಇಲ್ಲ ಅಂತಾ ಹೇಳೋದಕ್ಕೆ ಯೋಗೇಶ್ ಯಾರು : ನಟಿ ವಿಜಯಲಕ್ಷ್ಮಿ

author img

By

Published : Oct 11, 2021, 7:18 PM IST

ಈ ಮೂರು ಲಕ್ಷ ಹಣದಿಂದ ನಾವು ಒಂದು ಮನೆ ಮಾಡಿ, ಬೆಂಗಳೂರಿನಲ್ಲೇ ಇರ್ತೀವಿ, ಹಾಗೇ ಈ‌ ಹಣದಿಂದ ನನ್ನ ಅಕ್ಕನ ಆಸ್ಪತ್ರೆ ಚಿಕಿತ್ಸೆ ಕೊಡಿಸುತ್ತೇನೆ..

ನಟಿ ವಿಜಯಲಕ್ಷ್ಮಿ
ನಟಿ ವಿಜಯಲಕ್ಷ್ಮಿ

ನಟಿ ವಿಜಯಲಕ್ಷ್ಮಿ, ಆಗಾಗ ಹಣದ ಸಮಸ್ಯೆ ಇದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಹಲವು ಬಾರಿ ವಿಡಿಯೋ ಮಾಡಿ ಮನವಿ ಮಾಡಿದ್ದರು. ಇತ್ತೀಚೆಗಷ್ಟೇ ನಟಿ ವಿಜಯಲಕ್ಷ್ಮಿ ತಾಯಿ ವಿಜಯಾ ಸುಂದರಂ ತೀರಿಕೊಂಡಿದ್ದರು. ಆ ಸಂಧರ್ಭದಲ್ಲಿ ಜನಸ್ನೇಹಿ ನಿರಾಶ್ರಿತರ ಆಶ್ರಮದ ಟ್ರಸ್ಟಿಯಾಗಿದ್ದ ಯೋಗೇಶ್, ನಟಿ ವಿಜಯಲಕ್ಷ್ಮಿ ತಾಯಿ ಅಂತ್ಯ ಸಂಸ್ಕಾರ ಮಾಡಿದ್ದರು.

ಈಟಿವಿ ಭಾರತ್​ ಜತೆ ನಟಿ ವಿಜಯಲಕ್ಷ್ಮಿ ಮಾತುಕತೆ..

ಆಗ ಯೋಗೇಶ್ ವಿಜಯಲಕ್ಷ್ಮಿಗೆ ಕೃತಜ್ಞತೆ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಿಜಯಲಕ್ಷ್ಮಿ ಕೂಡ ಜನಸ್ನೇಹಿ ನಿರಾಶ್ರಿತರ ಆಶ್ರಮದ ಟ್ರಸ್ಟಿ ಯೋಗೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಯೋಗೇಶ್ ಸಂಗ್ರಹಿಸಿದ್ದ 3 ಲಕ್ಷ 9000 ಸಾವಿರ ರೂ. ಹಣವನ್ನ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕ ಭಾ ಮಾ ಹರೀಶ್ ಅವರು ನಟಿ ವಿಜಯಲಕ್ಷ್ಮಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯಲಕ್ಷ್ಮಿ, ಸಹಾಯ ಮಾಡಿದ ಜನಸ್ನೇಹಿ ಯೋಗೇಶ್, ನನಗೆ ಕೃತಜ್ಞತೆ ಇಲ್ಲ ಅಂತಾ ಹೇಳೋದಕ್ಕೆ ಅವರು ಯಾರು ಅಂತಾ ತಮ್ಮ ಆಕ್ರೋಶ ಹೊರ ಹಾಕಿದರು. ಈ ಮೂರು ಲಕ್ಷ ಹಣದಿಂದ ನಾವು ಒಂದು ಮನೆ ಮಾಡಿ, ಬೆಂಗಳೂರಿನಲ್ಲೇ ಇರ್ತೀವಿ, ಹಾಗೇ ಈ‌ ಹಣದಿಂದ ನನ್ನ ಅಕ್ಕನ ಆಸ್ಪತ್ರೆ ಚಿಕಿತ್ಸೆ ಕೊಡಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.