ಬೆಂಗಳೂರು: 'ನಾಗಮಂಡಲ' ಖ್ಯಾತಿಯ ನಟಿ ವಿಜಯಲಕ್ಷ್ಮಿ ಫೇಸ್ಬುಕ್ನಲ್ಲಿ ಇದು ನನ್ನ ಕೊನೆಯ ವಿಡಿಯೋ ಎಂದು ಪೋಸ್ಟ್ ಹಾಕಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದೊಂದು ವಾರದಿಂದಲೂ ಈ ಬಗ್ಗೆ ನಿರಂತರವಾಗಿ ಸರಣಿ ವಿಡಿಯೋ ಹಾಕಿರುವ ವಿಜಯಲಕ್ಷ್ಮಿ, ಇಂದು ಫೇಸ್ಬುಕ್ನಲ್ಲಿ ಹಾಕಿರುವ ವಿಡಿಯೋದಲ್ಲಿ ಮೂರು ಬಿಪಿ ಮಾತ್ರೆ ತಗೊಂಡಿದ್ದೀನಿ ಹೇಳಿದ್ದಾರೆ.
ನಾನು ಹಲವು ವರ್ಷಗಳಿಂದ ಬಹಳ ಕಷ್ಟ ಪಟ್ಟಿದ್ದೀನಿ. ತಮಿಳಿನ ಸೀಮನ್ ಎನ್ನುವ ನಟ ನನಗೆ ಬಹಳ ಹಿಂಸೆ ನೀಡಿದ್ದಾನೆ. ಅಲ್ಲದೆ ನಾನು ವೇಶ್ಯಾವಾಟಿಕೆ ನಡೆಸುತ್ತಿದ್ದೇನೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ನನಗೆ ಬದುಕಲು ಬಿಡುತ್ತಿಲ್ಲ ಎಂದು ನಿರ್ದೇಶಕರಾದ ಸೀಮನ್ ಹಾಗೂ ಹರಿಂದರ ಮೇಲೆ ಅರೋಪ ಮಾಡಿದ್ದಾರೆ. ಅಲ್ಲದೆ ಕನ್ನಡಿಗರು ಅವರನ್ನು ಬಿಡಬೇಡಿ ಎಂದು ಹೇಳಿದ್ದಾರೆ.
ಇನ್ನು ಸದ್ಯದ ಮೂಲಗಳ ಪ್ರಕಾರ, ಅಸ್ವಸ್ಥರಾಗಿದ್ದ ವಿಜಯಲಕ್ಷ್ಮೀ ಅವರನ್ನು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಲವು ವರ್ಷಗಳಿಂದ ಚೆನ್ನೈನಲ್ಲಿ ವಾಸವಿದ್ದ ವಿಜಯಲಕ್ಷ್ಮಿ ಕಳೆದ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಅಲ್ಲದೆ ನನಗೆ ಅನಾರೋಗ್ಯದ ಸಮಸ್ಯೆ ಇದೆ ಎಂದು ಕನ್ನಡ ಚಿತ್ರರಂಗದ ಸಹಾಯಕ್ಕಾಗಿ ಮನವಿ ಮಾಡ್ಕೊಂಡಿದ್ರು.
ನಟ ಸುದೀಪ್ ಸೇರಿದಂತೆ ಹಲವರು ಸಹಾಯ ಮಾಡಿದ್ರು. ಕಳೆದ ವರ್ಷವೂ ಹೀಗೆ ವಿಡಿಯೋಗಳನ್ನ ಅಪ್ಲೋಡ್ ಮಾಡ್ತಿದ್ರು. ಆಗ ಹಣ ಸಹಾಯ ಮಾಡಿದ್ದ ನಟ ರವಿಪ್ರಕಾಶ್ ಮೇಲೆಯೇ ಕಿರುಕುಳ ಆರೋಪ ಮಾಡಿದ್ರು. ಈ ಆರೋಪದ ನಂತರ ಅವರ ಸಹಾಯಕ್ಕೆ ಯಾರೂ ಮುಂದೆ ಬರಲಿಲ್ಲ ಎಂಬ ಮಾಹಿತಿ ಇದ್ದು. ಕಳೆದ ವರ್ಷ ರವಿಪ್ರಕಾಶ್ ಮೇಲೆ ಸುಳ್ಳು ಅರೇಸ್ಮೆಂಟ್ ಕೇಸ್ ಹಾಕಿದ್ದೇವೆ. ನಾವು ಮಾಡಿದ್ದು ತಪ್ಪಾಯಿತು ಎಂದು ಕ್ಷಮಿಸಿ ಎಂದು ನಟಿ ವಿಜಯಲಕ್ಷ್ಮಿ ಸೋದರಿ ಉಷಾಗೆ ಕರೆ ಮಾಡಿ ಹೇಳಿದ್ದರು. ಅದರ ವಿಡಿಯೋವನ್ನು ಇಂದು ಬೆಳಗ್ಗೆ ಕನ್ನಡ ನಟ ರವಿಪ್ರಕಾಶ್ ಶೇರ್ ಮಾಡಿದ್ದರು.