ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಸು ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿ ವೀಕ್ಷಕರ ಮನ ಸೆಳೆದಿರುವ ಸುಪ್ರೀತಾ ಸತ್ಯನಾರಾಯಣ, ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ರಹದಾರಿ ಸಿನಿಮಾದ ಮೂಲಕ ಹಿರಿತೆರೆಗೆ ಕಾಲಿಟ್ಟ ಸುಪ್ರೀತಾ, ಬಳಿಕ 'ಲಾಂಗ್ ಡ್ರೈವ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.
ಇದೀಗ 'ರುಗ್ಣ' ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಸುಪ್ರೀತಾ ಪಡೆದುಕೊಂಡಿದ್ದಾರೆ. ಇದರಲ್ಲಿ ಯುವ ಬರಹಗಾರ್ತಿಯಾಗಿ ಕಾಣಿಸಿದ್ದಾರೆ. ಈ ಸಿನಿಮಾದಲ್ಲಿ ನಾನು ಯುವ ಬರಹಗಾರ್ತಿಯಾಗಿ ಅಭಿನಯಿಸಿದ್ದೇನೆ. ಸಿನಿಮಾದ ಕೊನೆಯಲ್ಲಿ ಕಾದಂಬರಿಗಾರ್ತಿ ಮಿಂಚಲಿದ್ದಾರೆ. ನಾನು ಇದರಲ್ಲಿ ಭಿನ್ನ ಪಾತ್ರದಲ್ಲಿ ಕಾಣಿಸಿದ್ದೇನೆ. ಸವಾಲಿನ ಪಾತ್ರವಾದ ಕಾರಣ ಒಪ್ಪಿಕೊಂಡೆ.
ಅಂದಹಾಗೇ ರುಗ್ಣ ಸಿನಿಮಾದಲ್ಲಿ ಪೂರ್ತಿಯಾಗಿ ಹೊಸಬರ ತಂಡವೇ ಕಾಣಿಸಳಲಿದೆ. ಸಿನಿಮಾದ ಕಥೆ, ಪ್ರತಿ ಪಾತ್ರವನ್ನ ಅವರು ವಿವರಿಸಿದ ರೀತಿ, ಶೂಟಿಂಗ್ ಕುರಿತಾದ ಹೇಳಿದ ಪ್ಲಾನ್ಗಳು ನನಗೆ ತುಂಬಾ ಹಿಡಿಸಿತು ಎಂದು ಸುಪ್ರೀತಾ ಹೇಳಿದ್ದಾರೆ.