ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ತಲೆದೋರಿರುವ ನೀರಿನ ಅಭಾವಕ್ಕೆ ನಟಿ,ರಾಜಕಾರಣಿ ಸುಮಲತಾ ಅಂಬರೀಶ್ ಆಘಾತ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ 'ಅಮರ್' ಚಿತ್ರದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಸೇರಿದಂತೆ ಮಲೆನಾಡಿನಲ್ಲಿ ನೀರಿನ ಅಭಾವ ಉಂಟಾಗಿರೋದು ನೋವು ತಂದಿದೆ. ಮಂಜುನಾಥ ಸ್ವಾಮಿಗೆ ಅಭಿಷೇಕ ಮಾಡಲು ನೀರಿಲ್ಲ ಎಂಬುದನ್ನು ಕೇಳಿ ಆಘಾತವಾಯ್ತು. ಇದಕ್ಕೆಲ್ಲಾ ಸರ್ಕಾರವನ್ನು ದೂರುವುದೇ ಪರಿಹಾರವಲ್ಲ.ಮೊದಲು ನಾವು ಬದಲಾಗಬೇಕು.ಕಾಡು,ವನ್ಯ ಜೀವಿಗಳ ವಿನಾಶ ತಡೆಯಬೇಕು ಅಂತಾ ಜನತೆಗೆ ಕಿವಿಮಾತು ಹೇಳಿದ್ರು.
ಇದೇ ವೇಳೆ ತಮ್ಮ ಮಗನ ಚಿತ್ರದ ಬಗ್ಗೆ ಮಾತಾಡಿದ ಅವರು, 'ಅಮರ್' ಸಿನಿಮಾದಲ್ಲಿ ಅಂಬಿ ನಟಿಸಬೇಕೆನ್ನುವ ನನ್ನ ಬಯಕೆ ಈಡೇರಲಿಲ್ಲ. ದರ್ಶನ್ ನಟಿಸಬೇಕು ಅಂತಾ ಆಸೆ ಪಟ್ಟಿದ್ದೆ, ಅದರಂತೆ ಚಿತ್ರದಲ್ಲಿ ದರ್ಶನ್ ಒಂದು ಪಾತ್ರ ಮಾಡಿದ್ದಾನೆ . ಇದು ನಿಜಕ್ಕೂ ಖುಷಿ ನೀಡಿದೆ ಎಂದರು. ಸಿನಿಮಾದಲ್ಲಿ ಅಭಿ ನನ್ನ ಥರಾನೇ ಕಾಣಿಸ್ತಾನೆ ಅಂತಾ ಅಂಬರೀಶ್ ಯಾವಾಗ್ಲೂ ಹೇಳ್ತಾ ಇದ್ರು ಎಂದು ಸುಮಲತಾ ಮೆಲುಕು ಹಾಕಿದ್ರು.