'ಮೊಗ್ಗಿನ ಮನಸು' ಸಿನಿಮಾ ಮೂಲಕ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಗಮನ ಸೆಳೆದವರು ನಟಿ ಶುಭಾ ಪೂಂಜಾ. ಬಿಗ್‌ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದ ನಂತರ ಶುಭಾ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಆಗಿದೆಯಂತೆ. ಹೊಸ ಸಿನಿಮಾ 'ರೈಮ್ಸ್'ನಲ್ಲಿ ಪತ್ರಕರ್ತೆಯ ಪಾತ್ರ ನಿಭಾಯಿಸಿರುವ ಇವರು, ಈಟಿವಿ ಭಾರತ ಜೊತೆ ಸಿನಿಮಾ ಬದುಕು ಹಾಗೂ ಮದುವೆ ವಿಚಾರಗಳನ್ನು ಹಂಚಿಕೊಂಡರು.
ಬಿಗ್‌ಬಾಸ್ ಶೋದಿಂದ ಹೊರಬಂದ ಮೇಲೆ ಚಿಕ್ಕಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಾಗಿದ್ದಾರಂತೆ. ತಾನು ಹೋದಲೆಲ್ಲಾ ಮಕ್ಕಳು, ವಯಸ್ಸಾದವರು, ಮಹಿಳೆಯರು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದಾರೆ. ಈ ಪ್ರೀತಿಯನ್ನು ಬಿಗ್‌ಬಾಸ್ ಶೋ ಕೊಟ್ಟಿದೆ ಅಂತಾರೆ ಮೊಗ್ಗಿನ ಮನಸ್ಸಿನ ನಟಿ.
ಪ್ರೊಡಕ್ಷನ್ ಕನಸು:
ಶುಭಾ ಪೂಂಜಾ ರೈಮ್ಸ್ ಸಿನಿಮಾ ಜೊತೆಗೆ ತ್ರಿದೇವಿ, ಅಂಬುಜ.. ಹೀಗೆ ಹೊಸ ಹೊಸ ಸಿನಿಮಾಗಳನ್ನು ಕೈಗೆತ್ತಿಕೊಂಡಿದ್ದಾರೆ. ತ್ರಿದೇವಿ ಸಿನಿಮಾ ಮೂಲಕ ನಿರ್ಮಾಣಕ್ಕೂ ಕೈ ಹಾಕುತ್ತಿದ್ದಾರಂತೆ. 'ನನ್ನ ಜೀವನದಲ್ಲಿ ಚೇಂಜ್ ಓವರ್ ಬೇಕು ಎಂಬ ಕಾರಣಕ್ಕೆ ತ್ರಿದೇವಿ ಸಿನಿಮಾ ಮಾಡುತ್ತಿದ್ದೇನೆ. ನಿರ್ದೇಶಕ ಶ್ರೀನಿ ಇದ್ದಾರೆ. ಬಿಗ್ಬಾಸ್ನಿಂದ ಬಂದ ಮೇಲೆ ಅಂಬುಜ ಸಿನಿಮಾ ಮಾಡ್ತಿದ್ದೀನಿ. ಕಿರುತೆರೆಯಲ್ಲಿ ಪ್ರೊಡಕ್ಷನ್ಸ್ ಮಾಡಬೇಕು ಅನ್ನೋದು ನನ್ನ ಬಹುದಿನಗಳ ಕನಸು' ಎನ್ನುತ್ತಾರೆ ಶುಭಾಪೂಂಜಾ.
ಮಂಗಳೂರು ಮೂಲದ ಬಿಸ್ನೆಸ್‌ಮನ್ ಜೊತೆ ಮದುವೆ:
ಕನ್ನಡದಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಶುಭಾ ಪೂಂಜಾ ಸದ್ಯದಲ್ಲೇ ಮದುವೆ ಆಗ್ತಿದ್ದಾರೆ. ಮಂಗಳೂರು ಮೂಲದ ಬಿಸ್ನೆಸ್‌ಮನ್ ಸುಮಂತ್ ಮಹಾಬಲ ಎಂಬುವರ ಜೊತೆ ಹಸೆಮಣೆ ಏರುತ್ತಿದ್ದಾರೆ. ಅಂದಹಾಗೆ, ಇವರದ್ದು ಲವ್ ಕಮ್ ಆರೇಂಜ್ ಮ್ಯಾರೇಜ್ ಅಂತೆ. 'ನಾನು ಒಂದು ಫಂಕ್ಷನ್ನಲ್ಲಿ ಸುಮಂತ್ನನ್ನು ಮೀಟ್ ಮಾಡಿದ್ದು. ಆದಾದ ಮೇಲೆ ಒಬ್ಬರಿಗೊಬ್ಬರು ಪರಿಚಯ ಆಗಿ ಸ್ನೇಹಿತರಾದೆವು. ಆ ಸಮಯದಲ್ಲಿ ಸುಮಂತ್ ನಮ್ಮ ಮನೆಗೆ ಬರ್ತಿದ್ದರು. ಆಗ ನಮ್ಮ ತಾಯಿ ಕೂಡ ಮದುವೆ ಮಾಡಿಕೋ ಅಂತಾ ಹೇಳುತ್ತಿದ್ದರು. ಒಂದು ದಿನ ಸುಮಂತ್ ಮನೆಗೆ ಬಂದಾಗ, ನಮ್ಮ ಅಮ್ಮ ಸುಮಂತ್ಗೆ ಮದುವೆ ಮಾಡಿಕೊಳ್ಳುತ್ತಿಯಾ ಅಂತಾ ಕೇಳಿದ್ದರಂತೆ. ಈ ರೀತಿಯಾಗಿ ಮದುವೆ ಫಿಕ್ಸ್ ಆಯ್ತು' ಎಂದರು.
ಹೊಸ ವರ್ಷಕ್ಕೆ ಸುಮಂತ್ ಜೊತೆ ಮದುವೆ ಆಗ್ತಾ ಇರೋ ಶುಭಾಪೂಂಜಾ, ತಮ್ಮ ಹುಡುಗ ಸಿನಿಮಾಗಳ ಬಗ್ಗೆ ಒಳ್ಳೆ ಟಿಪ್ಸ್ ಕೊಡ್ತಾನೆ. ಅದರಲ್ಲಿ ಪ್ರೊಡಕ್ಷನ್ ಮಾಡು ಅಂತಾ ಹೇಳಿದ್ದು ಸುಮಂತ್. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗೋದಿಕ್ಕೆ ಕಾರಣ ಸುಮಂತ್. ಒಂದೇ ತರ ಪಾತ್ರಗಳನ್ನು ಮಾಡಬೇಡ, ಜನರಿಗೆ ಇಷ್ಟ ಆಗುವ ಪಾತ್ರಗಳನ್ನು ಆಯ್ಕೆ ಮಾಡು, ವೆಬ್ ಸೀರಿಸ್ಗಳನ್ನು ಮಾಡು ಅಂತಾ ಸುಮಂತ್ ಮದುವೆಗೂ ಮುಂಚೆ ಸಪೋರ್ಟ್ ಮಾಡ್ತಾ ಇದ್ದಾರಂತೆ.
ಶುಭಾಗೆ ಆ್ಯಕ್ಟಿಂಗ್ ಬರೋಲ್ಲ ಅಂತಾ ಸುಮಂತ್ ಹೇಳಿದ್ದಾರಂತೆ. ಶುಭಾ ಮಾಡಿರೋ ಅಷ್ಟು ಸಿನಿಮಾಗಳಲ್ಲಿ ಮೊಗ್ಗಿನ ಮನಸ್ಸು ಸಿನಿಮಾ ಮಾತ್ರ ಚೆನ್ನಾಗಿದೆ ವಿಮರ್ಶೆ ಮಾಡುತ್ತಿರುತ್ತಾರಂತೆ. ಅವನು ನನಗೆ ಅತ್ಯುತ್ತಮ ವಿಮರ್ಶಕ. ಮದುವೆ ವಿಚಾರಕ್ಕೆ ಬಂದಾಗ ಬಹಳ ಸರಳವಾಗಿ ಸದ್ಯದಲ್ಲೇ ಮದುವೆ ಆಗುತ್ತೇವೆ ಎಂದು ಶುಭಾ ಪೂಂಜಾ ಹೇಳಿದರು.
ಇದನ್ನೂ ಓದಿ: 77ನೇ ವಸಂತಕ್ಕೆ ಕಾಲಿಟ್ಟ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್.. ಕುಟುಂಬಸ್ಥರು, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ