ಕನ್ನಡ ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡಿ ತನ್ನದೇ ಐಡೆಂಟಿಟಿ ಹೊಂದಿರುವ ನಟಿ ಶ್ರೀಲೀಲಾ ಅವರ ಬೈಟು ಲವ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶ್ರೀಲೀಲಾ ರಿಯಲ್ ಲೈಫ್ನಲ್ಲೂ ಹೀರೋಯಿನ್ ಆಗಿದ್ದಾರೆ.
ನಟಿ ಶ್ರೀಲೀಲಾ ಮಾತೃಶ್ರೀ ಮನೋವಿಕಾಸ ಕೇಂದ್ರದಿಂದ, ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ. 8 ತಿಂಗಳ ಮಗು ಗುರು ಹಾಗೂ ಶೋಭಿತ ಅನ್ನೋ ಹೆಣ್ಣು ಮಗಳನ್ನು ದತ್ತು ಪಡೆದಿದ್ದಾರೆ.
ಬೈಟು ಲವ್ ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರೋ ಶ್ರೀಲೀಲಾಗೆ ಆ ಮಗುವಿನೊಂದಿಗೆ ಒಂದು ಬಂಧ ಬೆಸೆದಿತ್ತು. ಮಾತೃಶ್ರೀ ಮನೋವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ನು ಕಂಡೊಡನೆ ಶ್ರೀಲೀಲಾ ಭಾವುಕರಾದ್ರು. ಜೊತೆಗೆ ಇಬ್ಬರು ಮಕ್ಕಳನ್ನು ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ, ಸ್ಫೂರ್ತಿ ತುಂಬಿದ್ದಾರೆ.
ಇದನ್ನೂ ಓದಿ: ಹ್ಯಾಪಿ ಮೂಡ್ನಲ್ಲಿ ಶೆಹನಾಜ್ ಗಿಲ್.. ಪಾರಿವಾಳಗಳಂತೆ ಹಾರ ಬಯಸುತ್ತೇನೆಂದ ನಟಿ
ಈ ವೇಳೆ ಬೈಟು ಲವ್ ಚಿತ್ರದ ನಿರ್ದೇಶಕ ಹರಿ ಸಂತು ಶ್ರೀಲೀಲಾ ಅವ್ರಿಗೆ ಸಾಥ್ ನೀಡಿದ್ರು. ಶ್ರೀಲೀಲಾ ಅಭಿನಯದ ಬೈಟು ಲವ್ ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದೆ.
ಈ ಸಿನಿಮಾ ಇವತ್ತಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದೆಯಂತೆ. ಅಂಥ ವಿಶೇಷ ವಿಚಾರಗಳು ಚಿತ್ರದಲ್ಲಿವೆ ಅಂತಿದ್ದಾರೆ ಶ್ರೀಲೀಲಾ. ಬೈಟು ಲವ್ ಚಿತ್ರ ಇದೇ ತಿಂಗಳ 18ಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.