ಬೆಂಗಳೂರು: ಸ್ಯಾಂಡಲ್ವುಡ್ ನಟಿ - ಬಾಲಿವುಡ್ ನಿರ್ಮಾಪಕಿ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ (ನಿನ್ನೆ) ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಭೇಟಿಯಾಗಿದ್ದ ನಟಿ ಸಂಜನಾ ಗಲ್ರಾನಿ ಇಂದು ನಗರ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ಭೇಟಿಯಾದರು.
ಪ್ರಕರಣ ಸಂಬಂಧ ನಿನ್ನೆ ಕಮೀಷನರ್ ಭಾಸ್ಕರ್ ರಾವ್ ಭೇಟಿ ಮಾಡಿದ್ದ ಸಂಜನಾಗೆ ಕೇಂದ್ರ ವಿಭಾಗದ ಡಿಸಿಪಿ ಅವರನ್ನು ಭೇಟಿಯಾಗುವಂತೆ ಸೂಚಿಸಲಾಗಿತ್ತು. ಹೀಗಾಗಿ ದೂರು ನೀಡಲು ಇವತ್ತು ಸಂಜನಾ ಹಾಗೂ ಅವರ ತಾಯಿ ಜೊತೆ ಆಗಮಿಸಿದ್ದಾರೆ.
ಕಳೆದ ಡಿಸೆಂಬರ್ 24ರ ರಾತ್ರಿ ರೆಸಿಡೆನ್ಸಿ ರಸ್ತೆಯಲ್ಲಿ ಕಜೆ ಕೆಫೆಯಲ್ಲಿ ವಂದನಾ ಹಾಗೂ ಸಂಜನಾ ನಡುವೆ ಗಲಾಟೆ ನಡೆದಿತ್ತು. ನಟಿ ಸಂಜನಾ ವಿರುದ್ಧ ವಂದನಾ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ವಂದನಾ ದೂರಿನ್ವಯ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಅಪರಾಧ) ದಾಖಲಾಗಿತ್ತು.
ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಮಾತನಾಡಿ, ಸುಖಾಸುಮ್ಮನೆ ಜೈಲಿಗೆ ಹಾಕಿಸುತ್ತೇನೆ ಅಂತಾ ವಂದನಾ ಹೇಳಿದ್ದಾರೆ ಎಂದು ಹೇಳಿದರು. ಠಾಣೆಗೆ 10 ಬಾರಿ ಕರೆ ಮಾಡಿದ್ದಾರೆ. ವಂದನಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಈಗಲೇ ಅರೆಸ್ಟ್ ಮಾಡಿಸುತ್ತೇನೆ ಎಂದು ಧಮಕಿ ಹಾಕಿದ್ದಳು ಎಂದು ಸಂಜನಾ ಅಳಲು ತೋಡಿಕೊಂಡಿದ್ದಾರೆ. ಇದರಲ್ಲಿ ನನ್ನ ತಪ್ಪೇ ಇಲ್ಲ. ನನ್ನ ರಕ್ಷಿಸಿಕೊಳ್ಳಲು ಫೋನ್ ಆನ್ ಮಾಡಿಕೊಂಡಿದೆ. ನನ್ನ ತಾಯಿಯನ್ನು ವಂದನಾ ಬೈದಿದ್ದಾಳೆ ಎಂದು ವಿವರಿಸಿದ್ದಾರೆ.
ಎಂಇಬಿ ಪಾರ್ಟಿ ಸೇರಿಕೋ ಎಂದು ವಂದನಾ ಕಿರುಕುಳ ನೀಡ್ತಿದ್ದಳು. ಅಮಿತ್ ಮಿಶ್ರಾ ಕ್ರಿಕೆಟ್ನಿಂದ ಹೊರ ಬೀಳುವುದಕ್ಕೆ ವಂದನಾ ಕಾರಣ ಎಂದ ಆರೋಪಿಸಿದ್ದಾರೆ. ನಾನು ವಿಸ್ಕಿ ಬಾಟಲ್ನಲ್ಲಿ ಹೊಡೆದಿಲ್ಲ. ನಿಮ್ಮ ಬಳಿ ಯಾವ ಸಾಕ್ಷಿ ಇದೆ. ನನ್ನ ಹೆಸರು ಹಾಳಾಗುತ್ತೆ. ನನ್ನ ಹೆಸರು ಹಾಳು ಮಾಡೋದಕ್ಕೆ ಈ ರೀತಿ ಮಾಡ್ತಿದ್ದಾಳೆ ಎಂದರು.