ಚಿತ್ರರಂಗದಲ್ಲಿ ಹೆಸರು ಮಾಡುವುದು ಸುಲಭದ ಮಾತಲ್ಲ. ಕೆಲವು ನಾಯಕಿಯರು ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಮದುವೆಯಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದರೆ ಮತ್ತೆ ಕೆಲವು ನಾಯಕಿಯರು ಹಲವು ವರ್ಷಗಳ ನಂತರ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಾರೆ. ಆದರೆ ಈ ನಟಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ.
2011 ರಲ್ಲಿ ಬಿಡುಗಡೆಯಾದ 'ಕೂಲ್' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ಗೆ ನಾಯಕಿಯಾಗಿ ಅಭಿನಯಿಸಿದ್ದ ಸನಾ ಖಾನ್ ಸಿನಿಮಾರಂಗವನ್ನು ತೊರೆದಿದ್ದಾರೆ. ಸನಾ ಖಾನ್ ಸುಮಾರು 50 ಜಾಹೀರಾತುಗಳಲ್ಲಿ ಹಾಗೂ 5 ಭಾಷೆಗಳ ಸುಮಾರು 14 ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಬಿಗ್ ಬಾಸ್ 6 ಆವೃತ್ತಿಯಲ್ಲಿ ಕೂಡಾ ಸನಾ ಖಾನ್ ಭಾಗವಹಿಸಿದ್ದರು. ಸಲ್ಮಾನ್ ಖಾನ್ ಅಭಿನಯದ 'ಜೈ ಹೋ' ಚಿತ್ರದಲ್ಲಿ ಕೂಡಾ ಸನಾ ಖಾನ್ ಕಾಣಿಸಿಕೊಂಡಿದ್ದರು. ಆದರೆ ನಾನು ಈಗ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದಿದ್ದೇನೆ. ಆದ್ದರಿಂದ ಚಿತ್ರರಂಗಕ್ಕೆ ವಿದಾಯ ಹೇಳುತ್ತಿರುವುದಾಗಿ ಸನಾ ಖಾನ್ ಹೇಳಿಕೊಂಡಿದ್ದಾರೆ.
ಸನಾಖಾನ್ಗೆ ಇನ್ಸ್ಟಾಗ್ರಾಮ್ನಲ್ಲಿ 3.3 ಮಿಲಿಯನ್ ಫಾಲೋವರ್ಸ್ಗಳಿದ್ದರು. ಆದರೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಹುತೇಕ ಎಲ್ಲಾ ಪೋಸ್ಟ್ಗಳನ್ನು ಸನಾ ಖಾನ್ ಡಿಲೀಟ್ ಮಾಡಿದ್ದಾರೆ. ಮೆಚ್ಚಿನ ನಟಿ ಈ ರೀತಿ ನಿರ್ಧಾರ ಕೈಗೊಂಡಿರುವುದು ಅಭಿಮಾನಿಗಳಿಗೆ ಬಹಳ ಬೇಸರ ಉಂಟಾಗಿದೆ.