ETV Bharat / sitara

ಪ್ರಗ್ನೆನ್ಸಿಯನ್ನೂ ಅಣಕಿಸೋರ ವಿರುದ್ಧ ಸಿಡಿಮಿಡಿ.. ಸಿನಿ ಪಯಣದಲ್ಲಿ ಸಮೀರಾಗೆ ಕಾಂಪ್ರಮೈಸ್​​ಗೂ ಕರೆದಿದ್ದರಂತೆ! - ಬೆಳ್ಳಿ ಪರದೆ

ಗರ್ಭಿಣಿಯರ ದೇಹದಲ್ಲಿ ನೈಸರ್ಗಿಕ ಬದಲಾವಣೆ ಸಹಜ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಇದನ್ನೂ ಕೂಡ ಟ್ರೋಲ್ ಮಾಡುತ್ತಾರೆ. ಅದರಲ್ಲೂ ಮಹಿಳೆಯರು ಕೂಡ ಬಾಡಿ ಶೇಮಿಂಗ್​ ಬಗ್ಗೆ ಕಾಮೆಂಟ್ ಮಾಡೋದ ನೋಡಿದ್ರೆ ಶಾಕ್ ಆಗುತ್ತೆ ಎಂದಿದ್ದಾರೆ ಸಮೀರಾ .

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : May 8, 2019, 9:16 AM IST

Updated : May 8, 2019, 9:42 AM IST

ಬಹುಭಾಷಾ ನಟಿ ಸಮೀರಾ ರೆಡ್ಡಿ 'ಮೀಟೂ' ಆರೋಪ ಮಾಡಿದ್ದಾರೆ. ಚಿತ್ರರಂಗದಲ್ಲಿ ಸಕ್ಸಸ್ ಪಡೆದ ಮೇಲೂ ಕೆಲವೊಂದಿಷ್ಟು ಮಂದಿ ಕಾಂಪ್ರಮೈಸ್​ ಬಗ್ಗೆ ನನ್ನ ಜತೆ ಮಾತಾಡಿದ್ದರು ಎಂದಿದ್ದಾರೆ.

ಚಿತ್ರರಂಗದಲ್ಲಿ ಇದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಈಗಾಗಲೇ ಸಾಕಷ್ಟು ನಟಿಯರು ಮಾತಾಡಿದ್ದಾರೆ. ಬೆಳ್ಳಿ ಪರದೆಯ ಹಿಂದಿರುವ ಕರಾಳ ಮುಖ ಅನಾವರಣ ಮಾಡಿದ್ದಾರೆ. ಅವಕಾಶ ಬೇಕಾದ್ರೆ ಮಂಚ ಏರಲೇಬೇಕು ಎನ್ನುವ ಪುರಾತನ ಅಲಿಖಿತ ಒಪ್ಪಂದದ ಬಗ್ಗೆ ಹೋರಾಟವೇ ನಡೆದಿದೆ. ಈಗ ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸಮೀರಾ ಸರದಿ. ಸುದೀಪ್ ಜತೆ ವರದನಾಯಕ ಚಿತ್ರದಲ್ಲಿ ನಟಿಸಿರುವ ಈಕೆ, ಚಿತ್ರರಂಗದ ಮತ್ತೊಂದು ಮುಖ ಕಳಚಿಟ್ಟಿದ್ದಾರೆ.

ತಮಿಳು ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಾವು ಎದುರಿಸಿದ್ದ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ. 'ನಾನು ಚಿತ್ರರಂಗದಲ್ಲಿ ನೇಮು ಫೇಮು ಪಡೆದ ಮೇಲೂ ಕೆಲವೊಂದಿಷ್ಟು ಜನರು ನನ್ನ ಬಳಿ ಕಾಂಪ್ರಮೈಸ್​​ ಬಗ್ಗೆ ಮಾತಾಡಿದ್ದರು' ಎಂದು ಸಮೀರಾ ರೆಡ್ಡಿ ಹೇಳಿಕೊಂಡಿದ್ದಾರೆ.

ಇದೇ ವೇಳೆ ತಮ್ಮ ಪ್ರಗ್ನೆನ್ಸಿ ಬಗ್ಗೆ ಅಣಕಿಸಿದವರ ಬಗ್ಗೆಯೂ ಬೇಸರ ವ್ಯಕ್ತಪಡಿಸಿರುವ ಸಮೀರಾ, ಗರ್ಭಿಣಿಯರ ದೇಹದಲ್ಲಿ ನೈಸರ್ಗಿಕ ಬದಲಾವಣೆ ಸಹಜ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಇದನ್ನೂ ಕೂಡ ಟ್ರೋಲ್ ಮಾಡುತ್ತಾರೆ. ಅದರಲ್ಲೂ ಮಹಿಳೆಯರು ಕೂಡ ಬಾಡಿ ಶೇಮಿಂಗ್​ ಬಗ್ಗೆ ಕಾಮೆಂಟ್ ಮಾಡೋದು ನೋಡಿದ್ರೆ ಶಾಕ್ ಆಗುತ್ತೆ ಎಂದಿದ್ದಾರೆ.

Intro:Body:Conclusion:
Last Updated : May 8, 2019, 9:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.