ETV Bharat / sitara

ಸದ್ಯ ರಕ್ಷಿತ್ ಜತೆಗೆ ನಿಮ್ಮ ಸಂಬಂಧ ಹೇಗಿದೆ? ಪ್ರಶ್ನೆಗೆ ರಶ್ಮಿಕಾ ಉತ್ತರ ಏನು ಗೊತ್ತಾ?

ಡಿಯರ್ ಕಾಮ್ರೇಡ್ ಸಿನಿಮಾ ಪ್ರಚಾರಕ್ಕೆ ಸಿಲಿಕಾನ್ ಸಿಟಿಗೆ ಬಂದಿದ್ದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ತಮ್ಮ ಬ್ರೇಕಪ್ ಕುರಿತು ಪ್ರಶ್ನೆ ಎದುರಾಯಿತು.

author img

By

Published : Jul 13, 2019, 2:18 PM IST

ರಶ್ಮಿಕಾ

ಗೀತಗೋವಿಂದಂ ಸಿನಿಮಾದ ನಂತರ ನಿಮ್ಮ ಮತ್ತು ರಕ್ಷಿತ್ ಶೆಟ್ಟಿ ನಡುವೆ ಬ್ರೇಕಪ್ ಆಯಿತು ಎನ್ನುವ ಸುದ್ದಿ ಕನ್ನಡ, ತೆಲುಗು ಸೇರಿದಂತೆ ಇಡೀ ಸೌಥ್ ಸಿನಿಮಾ ಇಂಡಸ್ಟ್ರಿಯಲ್ಲಿ ಹರಿದಾಡಿತು. ಇದಾದ ನಂತರ ನೀವು ಕೂಡ ಎಲ್ಲಿಯೂ ನೀವು ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಸಾಕಷ್ಟು ರೂಮರ್​ಗಳು ಕೂಡ ಕೇಳಿ ಬಂದವು. ಆದರೆ, ನೀವಾಗಲಿ ರಕ್ಷಿತ್ ಶೆಟ್ಟಿಯಾಗಲಿ ಈ ಬಗ್ಗೆ ಎಲ್ಲಿಯೂ ಮಾತಾಡಲಿಲ್ಲ. ಜತೆಗೆ ಸದ್ಯ ನಿಮ್ಮ ಹಾಗೂ ರಕ್ಷಿತ್ ಶೆಟ್ಟಿ ನಡುವಿನ ಸಂಬಂಧ-ಬಾಂಧವ್ಯ ಹೇಗಿದೆ ಎಂದು ಮಾಧ್ಯಮಗಳು ಪ್ರಶ್ನಿಸಿದವು.

ದಿಢೀರ್​ನೆ ಎದುರಾ ಈ ಪ್ರಶ್ನೆಯಿಂದ ನುಣುಚಿಕೊಳ್ಳಲು ಯತ್ನಿಸಿದ ರಶ್ಮಿಕಾ, ವಿಷಯಾಂತರಕ್ಕೆ ಪ್ರಯತ್ನಿಸಿದರು. ಈ ಪ್ರಶ್ನೆ ಕೇಳುತ್ತಿದ್ದಂತೆ ಒಂದಿಬ್ಬರು ಜೇಬಿನಿಂದ ಹೇಗೆ ಪೋನ್​ ತೆಗೆದರು ನೋಡಿ ಎಂದು ಪಕ್ಕದಲ್ಲೇ ಕುಳಿತಿದ್ದ ವಿಜಯ್ ದೇವರಕೊಂಡನಿಗೆ ಹೇಳುವ ಮೂಲಕ ಮಾತು ಮರೆಸಲು ನೋಡಿದರು.

ಮಾಧ್ಯಮಗೋಷ್ಟಿಯಲ್ಲಿ ನಟಿ ರಶ್ಮಿಕಾ

ಆಗ ಮಧ್ಯೆ ಬಾಯಿ ಹಾಕಿದ ವಿಜಯ್, 'ನನಗೆ ನಿಮ್ಮ ಪ್ರಶ್ಮೆ ಅರ್ಥ ಆಗಲಿಲ್ಲ. ಆದರೆ, ಇದು ಯಾರಿಗೂ ಸಂಬಂಧಪಟ್ಟ ವಿಷಯವಲ್ಲ, ಇಲ್ಲಿ ವೈಯಕ್ತಿಕ ಪ್ರಶ್ನೆ ಕೇಳುವುದು ಅಷ್ಟು ಸಮಂಜಸವಲ್ಲ ಎಂದರು. ಇವರ ಮಾತಿಗೆ ಧ್ವನಿಗೂಡಿಸಿದ ಕೊಡಗಿನ ಕುವರಿ, ಈ ಪ್ರಶ್ನೆ ತುಂಬಾ ಲಾಂಗ್ ಆಯಿತು, ಅರ್ಥ ಮಾಡಿಕೊಳ್ಳಲು ಸಹ ಆಗಲಿಲ್ಲ ಎಂದರು. ಜತೆಗೆ ಈ ಪ್ರಶ್ನೆಗೆ ಏನು ಉತ್ತರಿಸಬೇಕು ಎಂದು ನಂಗೆ ಗೊತ್ತಾಗುತ್ತಿಲ್ಲ ಎಂದು ಬಾಯಲ್ಲೇ ಗೊಣಗಿದರು.

ನಿಮ್ಮ ಲವ್​ ಬಗ್ಗೆ ಕೇಳಿ ಬಂದ ಗಾಸಿಪ್​ ಬಗ್ಗೆ ಉತ್ತರಿಸಿ ಎಂದು ಮತ್ತೊಂದು ಪ್ರಶ್ನೆ ತೂರಿ ಬಂದಾಗ, ಇದು ಗಾಸಿಪ್ ಅಂದ್ಮೇಲೆ ಅದು ಗಾಸಿಪ್​ ಅಷ್ಟೇ. ಜನರು ಏನ್ ಬೇಕಾದ್ದು ಮಾತಾಡ್ತಾರೆ ಎಂದು ಹೇಳಿ ಸುಮ್ಮನಾದರು ರಶ್ಮಿಕಾ. ಇನ್ನು ನಿಮ್ಮ ಫ್ಯಾನ್ಸ್​ ಕೂಡ ಕೋಪಗೊಂಡಿದ್ದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅರೇ ನಮ್ಮ ಅಭಿಮಾನಿಗಳು ನನ್ನ ಜತೆ ಮಸ್ತ್ ಆಗಿದ್ದಾರೆ. ಯಾವಾಗಲೂ ಅವರ ಜತೆ ಚಾಟ್, ಟ್ಟ್ವೀಟ್​ ಮಾಡ್ತೀರುತ್ತೇನೆ. ನಮ್ಮ ನಡುವೆ ಫುಲ್ ಅಂಡರ್​ಸ್ಟ್ಯಾಂಡಿಂಗ್ ಇದೆ ಎಂದರು. ರಕ್ಷಿತ್ ಶೆಟ್ಟಿ ಜೊತೆ ನಿಮ್ಮ ಸಿನಿಮಾ ಯಾವಾಗ ಅಂತಾ ರಶ್ಮಿಕಾ ಮಂದಣ್ಣನ ಕೇಳಿದ್ರೆ, ಕಾಲ ಕೂಡಿ ಬಂದಾಗ ಅಂತಾ ಹಾರಿಕೆ ಉತ್ತರ ಕೊಟ್ರು‌.

Intro:ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕ ಮಂದಣ್ಣ ರಕ್ಷಿತ್ ಶೆಟ್ಟಿ ಎಂಗೇಜ್ ಆಗಿರೋದು ಗೊತ್ತಿರುವ ವಿಚಾರ ಆದ್ರೆ ರಶ್ಮಿಕ ಮಂದಣ್ಣ ಗೀತ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಕನಸಿನಲ್ಲಿ ಕಾಣಿಸಿಕೊಂಡ ನಂತರ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕ ಮಂದಣ್ಣ ಮದುವೆ ಬ್ರೇಕಪ್ ಆಗಿದೆ ಅನ್ನೋದು ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ನಲ್ಲಿ ಹೆಚ್ಚು ಕೇಳಿಬಂದಿತ್ತು

Body:ರಶ್ಮಿಕ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಮಧ್ಯೆ ವಿಷಯವಾಗಿ ವಿಜಯ್ ದೇವರಕೊಂಡ ಹೇಳಿದ ಉತ್ತರ ಕೇಳಿದರೆ ಎಲ್ಲರೂ ಶಾಕ್ ಆಗ್ತೀರಾ

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.