ETV Bharat / sitara

ನಾನು ಬಲಿಪಶು ಆಗಿದ್ದೇನೆ, ನಾನೇನು ಅನ್ನೋದು ಗೊತ್ತು: ರಾಗಿಣಿ - ರಾಗಿಣಿ ಸುದ್ದಿ

ನಟಿ ಮಣಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ಇಂದು ನಗರದ ಸಿಟಿ ಸಿವಿಲ್ ಕೋರ್ಟ್​​ನಲ್ಲಿರುವ ಎನ್.ಡಿ.ಪಿ.ಎಸ್ ಕೋರ್ಟ್​​ಗೆ ಹಾಜರಾಗಿದ್ದರು.

ನಾನು ಬಲಿಪಶು ಆಗಿದ್ದೇನೆ, ನಾನು ಏನೂ ಅನ್ನೋದು ಗೊತ್ತು : ರಾಗಿಣಿ

author img

By

Published : Jan 30, 2021, 4:06 PM IST

ಬೆಂಗಳೂರು : ಸ್ಯಾಂಡಲ್​​ವುಡ್ ಡ್ರಗ್ ಮಾಫಿಯ ಪ್ರಕರಣದ ಆರೋಪಿಗಳು ಮತ್ತು ನಟಿ ಮಣಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ಇಂದು ನಗರದ ಸಿಟಿ ಸಿವಿಲ್ ಕೋರ್ಟ್​​ನಲ್ಲಿರುವ ಎನ್.ಡಿ.ಪಿ.ಎಸ್ ಕೋರ್ಟ್​​ಗೆ ಹಾಜರಾದರು.

ಬೇಲ್​​ ಪಡೆದ ನಂತ್ರ ಸಂಜನಾ ತಾಯಿ ರೇಷ್ಮಾ ಮತ್ತು ವಕೀಲರ ಜೊತೆ ಮೂರನೆ ಬಾರಿಗೆ ಕೋರ್ಟ್​​ಗೆ ಬಂದಿದ್ದಾರೆ. ಇತ್ತ ರಾಗಿಣಿ ಬೇಲ್​ ಪಡೆದ ನಂತ್ರ ನಟಿ ರಾಗಿಣಿ ಮೊದಲ ಬಾರಿಗೆ ಹಾಜರಾಗಿದ್ದರು.

ಕೋರ್ಟ್​​ಗೆ ಹಾಜರಾಗಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಾಗಿಣಿ, ಕೋರ್ಟ್ ಪ್ರಕ್ರಿಯೆ ಇದ್ದ ಕಾರಣ ಹಾಜಾರಗಿದ್ದೇನೆ. ತನಿಖೆಗೆ ಸಹಕರಿಸುತ್ತೇವೆ, ಸಾಮಾನ್ಯ ವಿಚಾರಣೆಗೆ ಬಂದು ಹಾಜರಾದೆ ಎಂದರು.

ನಾನು ಬಲಿಪಶು ಆಗಿದ್ದೇನೆ, ನಾನು ಏನೂ ಅನ್ನೋದು ಗೊತ್ತು : ರಾಗಿಣಿ

ನನಗೆ ವ್ಯವಸ್ಥೆ ಮೇಲೆ ‌ನಂಬಿಕೆ ಇದೆ. ಬೇರೆಯವರ ಬಗ್ಗೆ ನಾನು ಈಗ ಮಾತಾಡಲ್ಲ. ನಾನು ಮತ್ತು ನನ್ನ ಕುಟುಂಬ ಈ ಪ್ರಕರಣದಿಂದ ನೊಂದಿದ್ದೇವೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ವಿವರಣೆ ಕೊಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

ನಾನು ಕನ್ನಡ ಚಿತ್ರೋದ್ಯಮಕ್ಕೆ ಬಂದು 15 ವರ್ಷ ಆಗಿದೆ. ಉಸಿರಾಡಲು ಸಮಯ ಕೊಡಿ. ನಾನು ಒಂದಷ್ಟು ವಿಚಾರ ಹೇಳುತ್ತೇನೆ. ನಾನು ಏನೂ ಅನ್ನೋದು ಗೊತ್ತು ಈ ಪ್ರಕರಣದಲ್ಲಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ. ನಾನು ಬಲಿ ಪಶು ಆಗಿದ್ದೇನೆ ಎಂದು ನಟಿ ರಾಗಿಣಿ ಮಾಧ್ಯಮಗಳ ಮುಂದೆ ಅಳಲನ್ನು ತೋಡಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.