'ವೆಡ್ಡಿಂಗ್ ಗಿಫ್ಟ್' ಸ್ಯಾಂಡಲ್ವುಡ್ನಲ್ಲಿ ಬರ್ತಾ ಇರೋ ನೂತನ ಸಿನಿಮಾ. ವಿಭಿನ್ನ ಕಥಾಹಂದರ ಇರುವ ಈ ಚಿತ್ರದಲ್ಲಿ ಯುವ ನಟ ನಿಶಾನ್ ನಾಣಯ್ಯ ಅಭಿನಯಿಸುತ್ತಿದ್ದಾರೆ. ಸೋನು ಗೌಡ ನಾಯಕಿಯಾಗಿದ್ದಾರೆ.
'ಉಪೇಂದ್ರ ಮತ್ತೆ ಬಾ' ಸಿನಿಮಾ ನಂತರ 'ಓಂ' ಸಿನಿಮಾ ಖ್ಯಾತಿಯ ಪ್ರೇಮ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ವೆಡ್ಡಿಂಗ್ ಗಿಫ್ಟ್ ಸಿನಿಮಾದ ಕಲರ್ಫುಲ್ ಫೋಟೋಶೂಟ್ ಅನ್ನು ನಿರ್ದೇಶಕ ವಿಕ್ರಂ ಪ್ರಭು ಮಾಡಿದ್ದಾರೆ. ಇದರಲ್ಲಿ ನಟಿ ಪ್ರೇಮ, ಯುವ ನಟ ನಿಶಾನ್ ನಾಣಯ್ಯ ಹಾಗೂ ಸೋನು ಗೌಡ ಅವರ ಫೋಟೋ ಶೂಟ್ ಅದ್ದೂರಿಯಾಗಿದೆ.
ಇಪ್ಪತ್ತು ವರ್ಷಗಳಿಂದ ಸೇಲ್ಸ್ ಹಾಗೂ ಸ್ಟಾಕ್ ಮಾರ್ಕೆಟಿಂಗ್ನಲ್ಲಿ ಅನುಭವ ಹೊಂದಿರುವ ನಿರ್ದೇಶಕ ವಿಕ್ರಂ ಪ್ರಭು ಈ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಮೂಲತಃ ಮಂಗಳೂರಿನವರಾದ ವಿಕ್ರಂ ಪ್ರಭು ಈಗ ಪುಣೆಯಲ್ಲಿ ವಾಸವಿದ್ದಾರೆ.
ಕಾನ್ಫಿಡಾದಲ್ಲಿ ನಿರ್ದೇಶನ ತರಬೇತಿ ಹಾಗೂ ZIMAದಲ್ಲಿ ಸಂಕಲನ ಕಾರ್ಯದ ಬಗ್ಗೆ ತಿಳಿದುಕೊಂಡಿರುವ ಅವರು, ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದ್ದಾರೆ. ನಿಶಾನ್ ನಾಣಯ್ಯ, ಸೋನು ಗೌಡ, ಪ್ರೇಮ, ಪವಿತ್ರ ಲೋಕೇಶ್ ಹಾಗೂ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಈ ಚಿತ್ರಕ್ಕೆ ನಿರ್ದೇಶಕರು ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂಜಯ್ ಶರ್ಮ, ಅಭಯ್ ದೇವ್ ಪುರಿ, ಅಶೀಶ್ ಪಾವಸ್ಕರ್ ಬರೆದಿದ್ದಾರೆ. ಸತೀಶ್ ಹೆಚ್ ವಿ ಹಾಗೂ ಆಂಟೋನಿ ಎ ಈ ಚಿತ್ರದ ಸಹ ನಿರ್ದೇಶಕರು.
ಸಿನಿಮಾದಲ್ಲಿ ಮೂರು ಹಾಡುಗಳಿವೆ. ಬಾಲಚಂದ್ರ ಪ್ರಭು ಸಂಗೀತ ನೀಡಲಿದ್ದಾರೆ. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಗೀತರಚನೆ ಹಾಗೂ ಉದಯಲೀಲ ಅವರ ಛಾಯಾಗ್ರಹಣ ವೆಡ್ಡಿಂಗ್ ಗಿಫ್ಟ್ ಚಿತ್ರಕ್ಕಿರಲಿದೆ. ನವೆಂಬರ್ 15ರಿಂದ ಬೆಂಗಳೂರು, ಉಡುಪಿ, ಮಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ವೆಡ್ಡಿಂಗ್ ಗಿಫ್ಟ್ ಸಿನಿಮಾದ ಚಿತ್ರೀಕರಣ ನಡೆಯಲಿದೆ.
ಓದಿ: 'ಸಲಗ' ನೋಡಿ ಮತ್ತಷ್ಟು ಬಲ ತುಂಬಿದ ಕರುನಾಡ ಚಕ್ರವರ್ತಿ : ವಿಜಯ್ ಡೈರೆಕ್ಷನ್ಗೆ ಶಿವಣ್ಣ ಫುಲ್ ಮಾರ್ಕ್ಸ್