ETV Bharat / sitara

ಸಿಲ್ವರ್ ಸ್ಕ್ರೀನ್​ನಲ್ಲಿ ಮಿಂಚಲು ರೆಡಿಯಾದ್ರು 'ಚಾರ್ ಮಿನಾರ್' ಚೆಲುವೆ - Senior Director Bhagavan

1975ರಲ್ಲಿ ಕನ್ನಡ ಚಿತ್ರರಂಗದಲ್ಲಿ ಕಮಾಲ್​ ಮಾಡಿದ್ದ ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್​​ ನಿರ್ದೇಶನ ಚಿತ್ರ 'ಶುಭಮಂಗಳ' ಪ್ರಣಯರಾಜ ಶ್ರೀನಾಥ್​ ಮತ್ತು ಆರತಿ ಕಾಂಬಿನೇಷನ್​ನಲ್ಲಿ ಹಿಟ್​​ ಆಗಿತ್ತು. ಸದ್ಯ, ಅದೇ ಶೀರ್ಷಿಕೆಯೊಂದಿಗೆ ಸ್ಯಾಂಡಲ್​​ವುಡ್​​ನಲ್ಲಿ ಮತ್ತೊಂದು ಚಿತ್ರ ತೆರೆ ಮೇಲೆ ಬರಲು ಸಿದ್ಧವಾಗಿದೆ.

Actress Meghana Gaonkar next movie shubhamangala
ಎರಡು ವರ್ಷಗಳ ಬಳಿಕ ಸಿಲ್ವರ್ ಸ್ಕ್ರೀನ್​ನಲ್ಲಿ ಮಿಂಚಲು ರೆಡಿಯಾದ್ರು ಚಾರ್ ಮಿನಾರ್ ಚೆಲುವೆ
author img

By

Published : Apr 14, 2021, 7:05 AM IST

ಎರಡು ವರ್ಷಗಳ ಹಿಂದೆ ಬಿಡುಗಡೆಯಾದ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದಲ್ಲಿ ಜಗ್ಗೇಶ್​ಗೆ ನಾಯಕಿಯಾಗಿ ನಟಿಸಿದ್ದ ಮೇಘನಾ ಗಾವಂಕರ್, ಇದೀಗ `ಶುಭಮಂಗಳ' ಎಂಬ ಸಿನಿಮಾ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

1975ರಲ್ಲಿ ಕನ್ನಡ ಚಿತ್ರರಂಗದಲ್ಲಿ ಕಮಾಲ್​ ಮಾಡಿದ್ದ ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್​​ ನಿರ್ದೇಶನ ಚಿತ್ರ 'ಶುಭಮಂಗಳ' ಪ್ರಣಯರಾಜ ಶ್ರೀನಾಥ್​ ಮತ್ತು ಆರತಿ ಕಾಂಬಿನೇಷನ್​ನಲ್ಲಿ ಹಿಟ್​​ ಆಗಿತ್ತು. ಸದ್ಯ, ಅದೇ ಶೀರ್ಷಿಕೆಯೊಂದಿಗೆ ಸ್ಯಾಂಡಲ್​​ವುಡ್​​ನಲ್ಲಿ ಮತ್ತೊಂದು ಚಿತ್ರ ತೆರೆ ಮೇಲೆ ಬರಲು ಸಿದ್ಧವಾಗಿದೆ.

ಯುವ ನಿರ್ದೇಶಕ ಸಂತೋಷ್ ಗೋಪಾಲ್ ಆ್ಯಕ್ಷನ್​ ಕಟ್ ಹೇಳುತ್ತಿರುವ​​​ 'ಶುಭಮಂಗಳ' ಟೈಟಲ್​​ ಅನ್ನು ಹಿರಿಯ ನಿರ್ದೇಶಕ ಭಗವಾನ್ ಬಿಡುಗಡೆ ಮಾಡಿದ್ದಾರೆ. ಹಳೆಯ`ಶುಭಮಂಗಳ'ಕ್ಕೂ ಈಗಿನ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

ಟೈಟಲ್ ಅನಾವರಣಗೊಳಿಸಿ ಮಾತನಾಡಿದ ಹಿರಿಯ ನಿರ್ದೇಶಕ ಭಗವಾನ್, ನಾವು ಹಳೆಯ ಕಾಲದ ನಿರ್ದೇಶಕರು. ಚಿತ್ರಕ್ಕೆ ಹೆಸರಿಟ್ಟು ಆ ನಂತರ ಚಿತ್ರೀಕರಣ ಮಾಡುತ್ತಿದ್ದೆವು. ಇದೀಗ ಚಿತ್ರದ ಚಿತ್ರೀಕರಣ ಮಾಡಿ, ಹೆಸರನ್ನು ಘೋಷಿಸಲಾಗುತ್ತಿದೆ. ಬಹಳ ಒಳ್ಳೆಯ ಟೈಟಲ್ ಇದು. ಹಳೆಯ ಚಿತ್ರ ನೆನಪಿಗೆ ಬರುತ್ತಿದೆ. ಈ ಚಿತ್ರತಂಡಕ್ಕೆ ಶುಭವಾಗಲಿ. ಇದೇ ರೀತಿ ಹೊಸ-ಹೊಸ ಪ್ರಯತ್ನಗಳನ್ನು ಮಾಡಿ ಎಂದು ಹಾರೈಸಿದ್ದಾರೆ.

ನಾನು ಭಗವಾನ್ ಅವರ ವಿದ್ಯಾರ್ಥಿಯಾಗಿದ್ದೆ. ಅವರು ತನ್ನ ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದು, ಬಹಳ ಖುಷಿ ತಂದಿದೆ ಎಂದು ಮೇಘನಾ ಹೇಳಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಮತ್ತು ಕಥೆ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಸಂಸ್ಥೆ ಜೊತೆಗೆ ಪವರ್ ಸ್ಟಾರ್ ಹೊಸ‌ ಸಿನಿಮಾ ಅನೌನ್ಸ್ !

ETV Bharat Logo

Copyright © 2025 Ushodaya Enterprises Pvt. Ltd., All Rights Reserved.