ಹೈದರಾಬಾದ್: ಬಹುಭಾಷಾ ಖ್ಯಾತ ನಟಿ ಮೀನಾ ಹಾಗೂ ಕುಟುಂಬದ ಎಲ್ಲರಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಈ ಕುರಿತ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ನೀವೆಲ್ಲಾ ಎಚ್ಚರಿಕೆಯಿಂದಿರಿ ಎಂದು ಅವರು ಮನವಿ ಮಾಡಿದ್ದಾರೆ.
'2022ರಲ್ಲಿ ನಮ್ಮ ಮನೆಗೆ ಬಂದ ಮೊದಲ ಅತಿಥಿ ಕೊರೊನಾ. ಇದಕ್ಕೆ ನಮ್ಮ ಇಡೀ ಕುಟುಂಬ ಇಷ್ಟವಾಗಿದೆ. ಆದರೆ ಅದನ್ನು ನಮ್ಮ ಮನೆಯಲ್ಲಿರಲು ಬಿಡುವುದಿಲ್ಲ. ನೀವೆಲ್ಲರೂ ಜಾಗರೂಕರಾಗಿರಿ, ಜವಾಬ್ದಾರಿಯಿಂದ ವರ್ತಿಸಿ. ಕೋವಿಡ್ ಹರಡಬೇಡಿ' ಎಂದು ಮನವಿ ಮಾಡಿದ್ದಾರೆ.
ಕಳೆದ ವರ್ಷ 'ದೃಶ್ಯಂ 2' ಮತ್ತು 'ಪೆದ್ದನ್ನ' ಚಿತ್ರಗಳ ಮೂಲಕ ಸಿನಿ ರಸಿಕರನ್ನು ರಂಜಿಸಿದ ಮೀನಾ ಸದ್ಯ ಮಲಯಾಳಂನ 'ಬ್ರೋ ಡ್ಯಾಡಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ತೆಲುಗು, ತಮಿಳು ಹಾಗೂ ಮಲಯಾಳಂ ಮಾತ್ರವಲ್ಲದೆ ಕನ್ನಡ ಸಿನಿಮಾಗಳಲ್ಲೂ ಮೀನಾ ನಟಿಸಿದ್ದಾರೆ. ಮೊಮ್ಮಗ, ಪುಟ್ನಂಜ, ನಾಗರ ಮಹಿಮೆ, ಅಂತರಾಳ, ಮೈ ಆಟೋಗ್ರಾಫ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಎಫೆಕ್ಟ್ : ಏಕ್ ಲವ್ ಯಾ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ