ದೇಶಕ್ಕಾಗಿ ಮಡಿದ ಯೋಧರಿಗೆ ನಮನ ಸಲ್ಲಿಸೋ ವಿಶೇಷ ಹಾಡೊಂದಕ್ಕೆ ಬಾಲಿವುಡ್ನ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಡ್ಯಾನ್ಸ್ ಕಂಪೋಸ್ ಮಾಡ್ತಿದ್ದಾರೆ. ಈ ಸ್ಪೆಷಲ್ ಸಾಂಗ್ನಲ್ಲಿ ಕೃಷ್ಣ ಅಭಿಷೇಕ್ ಮತ್ತು ಮಾನ್ವಿತಾ ಸ್ಟೆಪ್ ಹಾಕಲಿದ್ದಾರೆ. ಟಗರು ಪುಟ್ಟಿಗೆ ಗಣೇಶ್ ಕೊರಿಯೋಗ್ರಾಫ್ಲ್ಲಿ ನಟಿಸಬೇಕು ಅನ್ನೋದು ಬಹುವರ್ಷಗಳ ಕನಸಾಗಿತ್ತು. ಇದೀಗ ಅದು ಈಡೇರಿದೆ.
- " class="align-text-top noRightClick twitterSection" data="
">
ಇನ್ನು ಕಳೆದ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರರ ಅಟ್ಟಹಾಸದಿಂದ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ರು. ಇದೀಗ ಅವರಿಗೆ ಗೌರವ ಸಲ್ಲಿಸೋ ವಿಶೇಷ ಹಾಡೊಂದು ಬಾಲಿವುಡ್ಲ್ಲಿ ರೆಡಿಯಾಗ್ತಿದೆ.