ಸದಾ ಶೂಟಿಂಗ್ನಲ್ಲಿ ಬ್ಯುಸಿ ಇರ್ತಿದ್ದ ಸ್ಟಾರ್ಗಳು ಲಾಕ್ಡೌನ್ ಟೈಂನಲ್ಲಿ ಮನೆಯಲ್ಲಿ ಹೇಗೆ ಟೈಂ ಪಾಸ್ ಮಾಡ್ತಿದ್ದಾರೆ ಅನ್ನೋ ಕುತೂಹಲ ಫ್ಯಾನ್ಸ್ಗೆ ಇರುತ್ತೆ. ತಮ್ಮ ನೆಚ್ಚಿನ ನಟ, ನಟಿಯರು ಮನೆಯಲ್ಲಿ ಏನ್ಮಾಡ್ತಿದ್ದಾರೆ ಅನ್ನೋ ತವಕನೂ ಇರುತ್ತೆ.
![Actress Mamata Rahut](https://etvbharatimages.akamaized.net/etvbharat/prod-images/8054534_th.jpg)
ಆದ್ರೆ ನಟ ನಟಿಯರು ಮಾತ್ರ ಈ ಟೈಂನಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಮೂರೊತ್ತು ಶೂಟಿಂಗ್ನಲ್ಲೇ ಕಾಲ ಕಳೆಯುತ್ತಿದ್ದ ಕಲಾವಿದರಿಗೆ, ಫುಲ್ ಟ್ರೈಂ ಫ್ಯಾಮಿಲಿ ಜೊತೆ ಇರುವ ಅವಕಾಶ ಸಿಕ್ಕಿದೆ. ಅಲ್ಲದೆ ಮನೆಯಲ್ಲಿ ಹೊಸ ಹೊಸ ರೆಸಿಪಿಗಳ ಟ್ರೈ ಮಾಡಿ, ಟೇಸ್ಟ್ ಮಾಡಿ ಖುಷಿ ಪಡ್ತಿದ್ದಾರೆ. ಅದರ ಜೊತೆಗೆ ಕೆಲವು ನಟಿಯರು ಹೊಸ ಲುಕ್ನಲ್ಲಿ ಫೋಟೋ ಶೂಟ್ ಸಹ ಮಾಡಿಸಿದ್ದಾರೆ.
![Actress Mamata Rahut](https://etvbharatimages.akamaized.net/etvbharat/prod-images/8054534_thum.jpg)
ಹೌದು, ಇತ್ತೀಚೆಗಷ್ಟೆ ನಟಿ ಅದಿತಿ ಪ್ರಭುದೇವ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ರು. ಅದೇ ರೀತಿ ಈಗ ಲಾಕ್ಡೌನ್ ಟೈಂನಲ್ಲಿ ನಟಿ ಮಮತಾ ರಾಹುತ್ ಕೂಡ ಬಿಂದಾಸ್ ಆಗಿ ಫೋಟೋ ಶೂಟ್ ಮಾಡಿಸಿ ಹೊಸ ಲುಕ್ನಲ್ಲಿ ಮಿಂಚಿದ್ದಾರೆ.
![Actress Mamata Rahut](https://etvbharatimages.akamaized.net/etvbharat/prod-images/8054534_thumb.jpg)
ಲಾಕ್ಡೌನ್ ಇರುವ ಕಾರಣ ಫ್ರೀಯಾಗಿರುವ ಅವರ ಮನೆಯ ಸುತ್ತ ಮುತ್ತಲಿನ ರಸ್ತೆಗಳು ಹಾಗೂ ಪಾರ್ಕ್ನಲ್ಲೇ, ಮಮತಾ ಕಲರ್ಫುಲ್ ಫೋಟೋ ಶೂಟ್ ಮಾಡಿಸಿ ಮಿಂಚಿದ್ದಾರೆ.
![Actress Mamata Rahut](https://etvbharatimages.akamaized.net/etvbharat/prod-images/8054534_thu.jpg)