ದೃಶ್ಯ-2 ಸಿನಿಮಾ ಶೂಟಿಂಗ್ ವಿರಾಮದ ವೇಳೆಯಲ್ಲಿ ನಟಿ ಲಾಸ್ಯ ನಾಗರಾಜ್ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ. ದೃಶ್ಯ-2 ಚಿತ್ರದಲ್ಲಿ ತಮ್ಮ ಎರಡನೇ ಮಗಳ ಪಾತ್ರ ನಿರ್ವಹಿಸುತ್ತಿರುವ ಉನ್ನತಿ ಶೆಟ್ಟಿ ಜೊತೆ ರವಿಚಂದ್ರನ್ ಹೆಜ್ಜೆ ಹಾಕಿದ್ದಾರೆ. ಕ್ರೇಜಿಸ್ಟಾರ್ ಸಖತ್ ಡ್ಯಾನ್ಸ್ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ರಾಜೇಂದ್ರ ಪೊನ್ನಪ್ಪನಾಗಿ ಮತ್ತೆ ತೆರೆ ಮೇಲೆ ವಿಜೃಂಭಿಸುವುದಕ್ಕೆ ರೆಡಿಯಾಗಿರೋ ಚಿತ್ರ ದೃಶ್ಯ-2. ಈ ಚಿತ್ರ ಮಲೆಯಾಳಂನಲ್ಲಿ ರಿಲೀಸ್ ಆಗಿ ಹಿಟ್ ಆದ ಮೇಲೆ ನಿರ್ದೇಶಕ ಪಿ. ವಾಸು ಅವರ ಸಾರಥ್ಯದಲ್ಲಿ ಕನ್ನಡದಲ್ಲೂ ದೃಶ್ಯ- 2 ಸಿನಿಮಾ ಬರುತ್ತಿದೆ. ಬೆಂಗಳೂರು, ಮಡಿಕೇರಿಯಲ್ಲಿ ಬಿರುಸಿನ ಚಿತ್ರೀಕರಣ ಮಾಡುತ್ತಿರುವ ದೃಶ್ಯ- 2 ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದೆ.
ಈಗಾಗಲೇ ರವಿಚಂದ್ರನ್ ಜೊತೆಗೆ ಅನಂತ್ ನಾಗ್, ಶಿವಾಜಿಪ್ರಭು, ನವ್ಯಾ ನಾಯರ್, ಅಶೋಕ್, ಶಿವರಾಂ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ. ಚಿತ್ರದಲ್ಲಿ ಗ್ಲ್ಯಾಮರ್ ಹುಡುಗಿ ಲಾಸ್ಯ ನಾಗರಾಜ್ ಅಭಿನಯಿಸುತ್ತಿದ್ದಾರೆ. ಸದ್ಯ ಮಡಿಕೇರಿಯಲ್ಲಿ ದೃಶ್ಯ 2 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರದಲ್ಲಿ ಲಾಸ್ಯ ನಾಗರಾಜ್ ಸ್ಟಾರ್ ಕಲಾವಿದರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ.
ಈ ಸಿನಿಮಾ ಶೂಟಿಂಗ್ ಮಧ್ಯೆ ಕ್ರೇಜಿಸ್ಟಾರ್ ಜೊತೆ ಲಾಸ್ಯ ನಾಗರಾಜ್ ಬೊಂಬಾಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ಅಭಿನಯದ ಪ್ರೀತ್ಸೋದ್ ತಪ್ಪಾ ಸಿನಿಮಾದ ಹಾಡಿಗೆ ಲಾಸ್ಯ ಜೊತೆ ರವಿಮಾಮ ಸ್ಟೆಪ್ ಹಾಕಿದ್ದಾರೆ. ಇನ್ನು, ಲಾಸ್ಯ ನಾಗರಾಜ್ ದೃಶ್ಯ-2 ಚಿತ್ರ ಅಲ್ಲದೇ, ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.