ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಬಾಲಿವುಡ್ ನಟಿಯರು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದು, ಆ ಸಾಲಿಗೀಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಹ ಸೇರಿದ್ದಾರೆ. ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಐಟಂ ಸಾಂಗ್ನಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ.

ಜಾಕ್ವೆಲಿನ್ ಬಾಲಿವುಡ್‍ನ ಬ್ಯುಸಿ ನಟಿ. ಈಗಾಗಲೇ ಭೂತ್ ಪೊಲೀಸ್ ಚಿತ್ರದಲ್ಲಿ ನಟಿಸುತ್ತಿರುವ ಅವರು, ಮುಂದಿನ ದಿನಗಳಲ್ಲಿ ಬಚ್ಚನ್ ಪಾಂಡೆ,`ಕಿಕ್-2 ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಮಧ್ಯೆ ಅವರು ಕನ್ನಡಕ್ಕೂ ಎಂಟ್ರಿ ಕೊಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ಕೊನೆಯ ಹಂತದ ಚಿತ್ರೀಕರಣದಲ್ಲಿ ಫ್ಯಾಂಟಮ್
ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದಲ್ಲಿ ಒಂದು ಐಟಂ ಸಾಂಗ್ ಇದ್ದು, ಅದರಲ್ಲಿ ಬಾಲಿವುಡ್‍ನ ದೊಡ್ಡ ನಟಿಯೊಬ್ಬರು ನಟಿಸುತ್ತಾರೆ ಎಂಬ ಸುದ್ದಿ ಇದ್ದೇ ಇತ್ತು. ಇದೀಗ ನಟಿ ಜಾಕ್ವೆಲಿನ್ ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳುತ್ತಾರೆಂದು ಹೇಳಲಾಗುತ್ತಿದೆ. ಈ ಚಿತ್ರ ಕನ್ನಡದಲ್ಲಿ ನಿರ್ಮಾಣವಾದರೂ ತೆಲುಗು, ತೆಮಿಳು ಮತ್ತು ಹಿಂದಿಗೆ ಡಬ್ ಆಗಲಿದೆ.
ಹಾಗಾಗಿ, ಎಲ್ಲಾ ಭಾಷೆಗಳಿಗೂ ಸಲ್ಲುವ ಒಬ್ಬ ನಟಿ ಬೇಕು ಎಂಬ ಕಾರಣಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಕರೆದುಕೊಂಡು ಬರಲಾಗುತ್ತಿದೆ ಎಂಬ ಸುದ್ದಿ ಇದೆ. ಜಾಕ್ವೆಲಿನ್ ಹಾಡಿನ ಚಿತ್ರೀಕರಣ ಏಪ್ರಿಲ್‍ನಲ್ಲಿ ನಡೆಯಲಿದೆ ಎನ್ನುವ ಮಾಹಿತಿಯಿದೆ.