ಇತ್ತೀಚಿಗೆ ತಮಿಳಿನ ಅಡೈ ಸಿನಿಮಾದಲ್ಲಿ ನಟಿ ಅಮಲಾ ಪೌಲ್ ನೆಕೆಡ್ ಅವತಾರದಲ್ಲಿ ನಟಿಸಿ ಸುದ್ದಿಯಾಗಿದ್ದರು. ಇದೀಗ ಬಹುಭಾಷಾ ನಟಿ ಬಿಂದು ಮಾಧವಿ ಕೂಡ ಅವಕಾಶ ಸಿಕ್ರೆ ನಾನೂ ಕೂಡ ಕ್ಯಾಮರಾ ಮುಂದೆ ಬಟ್ಟೆ ಬಿಚ್ಚುವುದಾಗಿ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬ್ಯೂಟಿ, ಅಮಲಾ ಪೌಲ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿವಸ್ತ್ರಳಾಗಿ ನಟಿಸುವುದು ಸುಲಭವಲ್ಲ. ಆದರೆ, ಅಮಲಾ ಧೈರ್ಯದಿಂದ ಅದನ್ನು ಮಾಡಿದ್ದಾರೆ. ನಂಗೂ ಕೂಡ ಹಾಗೇ ನಟಿಸುವ ಆಸೆ. ಅವಕಾಶ ಸಿಕ್ಕರೆ ಖುಷಿಯಿಂದಲೇ ಕ್ಯಾಮರಾ ಮುಂದೆ ನ್ಯೂಡ್ ಆಗುವೆ ಎಂದಿದ್ದಾರೆ.
- " class="align-text-top noRightClick twitterSection" data="
">
ತೆಲುಗು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಬಿಂದು ನಂತರ ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ವೆಪ್ಪಂ, ಕೇಡಿ ಬಿಲ್ಲಾ ಕಿಲಾಡಿ ರಂಗ ಹಾಗೂ ಪ್ಯಾಸೇಜ್ 2 ಸೇರಿದಂತೆ ಕೆಲವು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ನಟಿಸಿರುವ ಈ ಚೆಲುವೆ ತಮಿಳಿನ ಬಿಗ್ಬಾಸ್ ಸೀಸನ್ 1ರ ಸ್ಪರ್ಧಿಯಾಗಿದ್ದರು. ಖ್ಯಾತ ನಟ ಕಮಲ್ ಹಾಸನ್ ಈ ಸೀಸನ್ ಹೋಸ್ಟ್ ಮಾಡಿದ್ದರು.
- " class="align-text-top noRightClick twitterSection" data="
">