ಕೊರೊನಾದಿಂದ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸ್ತಬ್ಧ ಆಗಿದೆ. ಚಿತ್ರಮಂದಿಗಳು ಮುಚ್ವಿದ್ದು, ಯಾವುದೇ ಸಿನಿಮಾ ಚಿತ್ರೀಕರಣಗಳು ನಡೆಯುತ್ತಿಲ್ಲ. ಇದರ ಎಫೆಕ್ಟ್ ಕನ್ನಡದ ತಾರೆಯರ ಮೇಲೆ ಆಗಿದೆ.
ಸಿನಿಮಾ ಶೂಟಿಂಗ್ ಅಂತಾ ಬ್ಯುಸಿ ಇರುತ್ತಿದ್ದ ಸ್ಟಾರ್ಸ್ ಈಗ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೆಲ ತಾರೆಯರು ಫ್ಯಾಮಿಲಿ ಜೊತೆ ಫಾರ್ಮ್ ಹೌಸ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮತ್ತೆ ಕೆಲವರು ಸಮಾಜಮುಖಿ ಕೆಲಸಗಳನ್ನ ಮಾಡ್ತಾ ಇದ್ದಾರೆ. ಇದೀಗ ತಾಯಿಗೆ ತಕ್ಕ ಮಗ, ರ್ಯಾಂಬೋ 2 ಚಿತ್ರಗಳಿಂದ ತಮ್ಮದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ಆಶಿಕಾ ರಂಗನಾಥ್, ಈ ಲಾಕ್‌ಡೌನ್ ಸಂದರ್ಭದಲ್ಲಿ ಕೈಯಲ್ಲಿ ಬುಟ್ಟಿ ಇಟ್ಟುಕೊಂಡು, ತೋಟದಲ್ಲಿ ಹಣ್ಣುಗಳನ್ನು ಕೀಳುತ್ತಾ, ಗಿಡಗಳನ್ನು ನೆಡುತ್ತಾ, ಕಳೆ ಕೀಳುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಸದ್ಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾವುದೇ ಚಿತ್ರೀಕರಣ ಇಲ್ಲದ ಕಾರಣ ಆಶಿಕಾ ರಂಗನಾಥ್ ತಮ್ಮ ಫಾರ್ಮ್ ಹೌಸ್ನಲ್ಲಿ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜತೆ ಕೆಲಸ ಮಾಡುತ್ತಾ, ಕಾಲ ಕಳೆಯುತ್ತಿದ್ದಾರೆ. ಆಶಿಕಾ ರಂಗನಾಥ್ ತೋಟದಲ್ಲಿ ಕೆಲಸ ಮಾಡುವ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ರೇಮೋ ಹಾಗೂ ಮದಗಜ ಚಿತ್ರಗಳಲ್ಲಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.