ಫೋಟೋಶೂಟ್ ಎಂದರೆ ನಟಿಯರು ತುಂಬಾ ಖುಷಿ ಪಡುತ್ತಾರೆ. ಆದರೆ, ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಪತ್ನಿ, ನಟಿ ಅಪೇಕ್ಷಾ ಪುರೋಹಿತ್ ಮಾತ್ರ ಚಿತ್ರರಂಗಕ್ಕೆ ಬಂದು ಎರಡು ವರ್ಷಗಳ ಬಳಿಕ ಫೋಟೋಶೂಟ್ ಮಾಡಿಸಿದ್ದಾರೆ.
ಉತ್ತರ ಕನಾರ್ಟಕದ ಚೆಲುವೆ ಅಪೇಕ್ಷಾ, ಮೊದಲು ಬಣ್ಣ ಹಚ್ಚಿದ್ದು,ಟಿ.ಎನ್.ಸೀತಾರಾಂ ನಿರ್ದೇಶನದ ‘ಕಾಫಿ ತೋಟ’ ಸಿನಿಮಾದಲ್ಲಿ. ಬಳಿಕ 'ಸಾಗುತ ದೂರ ದೂರ' ಎಂಬ ಚಿತ್ರದಲ್ಲಿ ಬೋಲ್ಡ್ ಪಾತ್ರವನ್ನ ನಿರ್ವಹಿಸಿದ್ದರು.
ಫೋಟೋಶೂಟ್ ಬಗ್ಗೆ ಪ್ರತಿಕ್ರಿಯಿಸಿರುವ ಅಪೇಕ್ಷಾ, ನನ್ನ ಬಳಿ ಯಾವುದೇ ಫೋಟೋ ಇಲ್ಲ ಅಂತಲೇ ಹೇಳಿಕೊಂಡಿದ್ದೆ. ಆದರೆ, ಕೆಲವರು ಮೇಡಂ ಫೋಟೋಶೂಟ್ ಮಾಡಿಸಿ ಎಂದು ಸಲಹೆ ನೀಡಿದ್ದರು.
ಫೋಟೋಶೂಟ್ ಮಾಡಿಸಬೇಕು ಅಂದಾಗ ನನ್ನ ಸ್ನೇಹಿತರೊಬ್ಬರು ಕ್ಯಾಮರಾ ತಂದು ಪಾರ್ಕ್ನಲ್ಲಿ ಫೋಟೋ ತೆಗೆದರು. ನನ್ನ ಫೋಟೋಸ್ ಎಲ್ಲೂ ಇರದ ಕಾರಣ, ಹಲವಾರು ಅವಕಾಶಗಳು ಮಿಸ್ ಆಗಿರಬಹುದು.
ಟಿವಿ ಧಾರಾವಾಹಿ ಮತ್ತು ಕಾಫಿ ತೋಟ, ಕಿನಾರೆ, ಸಾಗುತ ದೂರ ದೂರ ಎಂಬ ಮೂರು ಕನ್ನಡ ಸಿನಿಮಾಗಳನ್ನ ಮಾಡಿದ್ದೇನೆ. ಫೋಟೋಶೂಟ್ ಇಲ್ಲದೇ ಇದೆಲ್ಲ ಸಾಧ್ಯವಾಯಿತಾ? ಇನ್ನೂ ಮೊದಲೇ ಫೋಟೋಶೂಟ್ ಮಾಡಿಸಿಬಿಟ್ಟಿದ್ರೆ, ಹೆಂಗೆ ನಾವು... ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.