ETV Bharat / sitara

'ಪರಿಮಳ ಲಾಡ್ಜ್'​​ನಲ್ಲಿ ಮೋಹಕ ತಾರೆ ದಿಢೀರ್ ಪ್ರತ್ಯಕ್ಷ..! - ಮಾಜಿ ಸಂಸದೆ ರಮ್ಯಾ

ಬಹಳ ದಿನಗಳಿಂದ ಚಿತ್ರರಂಗದಿಂದ ದೂರ ಇದ್ದ ನಟಿ ರಮ್ಯಾ ದಿಢೀರ್ ಎಂದು 'ಪರಿಮಳ ಲಾಡ್ಜ್' ಚಿತ್ರದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಆದರೆ ಈ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿಲ್ಲ. ರಮ್ಯಾ ಫೋಟೋವನ್ನು ನಿರ್ದೇಶಕ ವಿಜಯ್ ಪ್ರಸಾದ್ ಈ ಚಿತ್ರಕ್ಕಾಗಿ ಬಳಸಿಕೊಂಡಿದ್ದಾರೆ.

'ಪರಿಮಳ ಲಾಡ್ಜ್'​​
author img

By

Published : Aug 29, 2019, 8:53 PM IST

ಸ್ಯಾಂಡಲ್​​ವುಡ್ ಲಕ್ಕಿಸ್ಟಾರ್, ಮೋಹಕ ತಾರೆ ಎಂದರೆ ನೆನಪಾಗುವುದು ನಟಿ ರಮ್ಯಾ. ಸದ್ಯಕ್ಕೆ ಚಿತ್ರರಂಗದಿಂದ ದೂರ ಇರುವ ರಮ್ಯಾ ತಮ್ಮ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ವಿಷಯ ಕೆಲವು ದಿನಗಳ ಹಿಂದೆ ಹರಿದಾಡುತ್ತಿತ್ತು.

ಸಿನಿಮಾದಲ್ಲಿ ರಮ್ಯಾ ಪೋಟೋ ಬಳಕೆ ಕುರಿತು ನಿರ್ದೇಶಕ ವಿಜಯ್ ಪ್ರಸಾದ್ ಪ್ರತಿಕ್ರಿಯೆ

ಬಹಳ ದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ, ಮಾಜಿ ಸಂಸದೆ ರಮ್ಯಾ ಇದ್ದಕ್ಕಿದ್ದಂತೆ ನಿರ್ದೇಶಕ ವಿಜಯ್​​ಪ್ರಸಾದ್ ಅವರ 'ಪರಿಮಳ ಲಾಡ್ಜ್'​​ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಈ ಹಿಂದೆ ವಿಜಯ್ ಅವರೇ ನಿರ್ದೇಶಿಸಿದ್ದ 'ನೀರ್ದೋಸೆ' ಸಿನಿಮಾದಿಂದ ರಮ್ಯಾ ಹೊರಬಂದಿದ್ದರು. ಇದೀಗ 'ಪರಿಮಳ ಲಾಡ್ಜ್​' ಸಿನಿಮಾದಲ್ಲಿ ರಮ್ಯಾ ಪೋಟೋವನ್ನು ಬಳಸಿಕೊಳ್ಳಲಾಗಿದೆ. ಈ ಸಿನಿಮಾ ರಮ್ಯಾ ಪೋಟೋದೊಂದಿಗೆ ಆರಂಭ ಆಗುತ್ತಂತೆ. ಟೀಸರ್ ನೋಡಿದಾಗ ಟೇಬಲ್ ಮೇಲೆ ನೀವು ರಮ್ಯಾ ಪೋಟೋವನ್ನು ಗಮನಿಸಬಹುದು. ಇನ್ನೊಂದು ಕಡೆ ನಿರ್ದೇಶಕ ವಿಜಯ್ ಪ್ರಸಾದ್ ರಮ್ಯಾ ಪೋಟೋವನ್ನು ಬಳಸಿಕೊಂಡು ಸಿನಿಮಾವನ್ನು ಮೇಲೆ ತರಲು ಪ್ರಯತ್ನಿಸುತ್ತಿದ್ದಾರೆ ಎಂಬ ಗುಸುಗುಸು ಆರಂಭವಾಗಿದೆ.

ramya
ರಮ್ಯಾ

ಆದರೆ ಈ ಬಗ್ಗೆ ವಿಜಯ್ ​​ಪ್ರಸಾದ್ ಹೇಳುವುದೇ ಬೇರೆ. ಇದರಲ್ಲಿ ಯಾವುದೇ ಗಿಮಿಕ್ ಇಲ್ಲ. ಪೋಟೋ ಬಗ್ಗೆ ರಮ್ಯಾ ಕೇಳಿದರೆ ನಾನು ಉತ್ತರ ಕೊಡುತ್ತೇನೆ ಎಂದು ವಿಜಯ್ ಪ್ರಸಾದ್ ಹೇಳುತ್ತಾರೆ. ಈ ಸಿನಿಮಾರಂಗದಲ್ಲಿ ಯಾರೂ ಮಿತ್ರರಲ್ಲ..ಯಾರೂ ಶತ್ರುಗಳಲ್ಲ ಎನ್ನೋದು ವಿಜಯ ಪ್ರಸಾದ್ ಮಾತು. ಸಿನಿಮಾದಲ್ಲಿ ರಮ್ಯಾ ಪೋಟೋ ಏಕೆ ಬಳಸಿಕೊಂಡಿದ್ದೇವೆ ಎಂಬುದನ್ನು ನೀವು ತಿಳಿಯಲು ಸಿನಿಮಾ ನೋಡಬೇಕು ಎನ್ನುತ್ತಾರೆ ವಿಜಯ್. ಇನ್ನು ರಮ್ಯಾ ಅಭಿನಯಿಸಿದ್ದ ವಿಜಯ್ ಪ್ರಸಾದ್ ನಿರ್ದೇಶನದ 'ಸಿದ್ಲಿಂಗು' ಸಿನಿಮಾ ಯಶಸ್ಸು ಕಂಡಿತ್ತು. ಇದೇ ಸಕ್ಸಸ್ ಖುಷಿಯಲ್ಲಿ ಸೆಟ್ಟೇರಿದ ಚಿತ್ರವೇ 'ನೀರ್​​​​​ದೋಸೆ'. ‌ಆದ್ರೆ ಈ ಸಿನಿಮಾದಿಂದ ರಮ್ಯಾ ಹೊರ ಬಂದರೂ ಕೂಡಾ ನಿರ್ದೇಶಕ ವಿಜಯ ಪ್ರಸಾದ್ ಮಾತ್ರ ಇನ್ನೂ ರಮ್ಯಾ ಅವರನ್ನು ಬಿಡುತ್ತಿಲ್ಲ ಎನ್ನುವುದು ವಿಪರ್ಯಾಸ.

Intro:ನಿರ್ದೇಶಕ ವಿಜಯ ಪ್ರಸಾದ್ ಪರಿಮಳ ಲಾಡ್ಜ್ ನಲ್ಲಿ ರಮ್ಯಾ ಪ್ರತ್ಯಕ್ಷ!!

ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ ಕಾಲ‌ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ ನಟಿ ಮೋಹಕ ತಾರೆ ರಮ್ಯಾ‌‌..ಸದ್ಯ ಕನ್ನಡ ಚಿತ್ರರಂಗದಿಂದ ಬಹಳ ದೂರ ಸರಿದಿರುವ ಪದ್ಮಾವತಿ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಆಗಾಗ ಆವ್ರ ಹೆಸರು ಮಾತ್ರ ಹೆಚ್ಚು ಸುದ್ದಿಯಲ್ಲಿರುತ್ತೆ. ಸದ್ಯಕ್ಕೆ ರಮ್ಯಾ ನೀರ್ ದೋಸೆ ಸಿನಿಮಾದಿಂದ ಹೊರ ಬಂದು ವರ್ಷಗಳು ಮುಗಿದು, ಆ ಸಿನಿಮಾ ಕೂಡ ರಿಲೀಸ್ ಆಗಿ ವರ್ಷಗಳು ಕಳೆದಿವೆ.ಆದ್ರೆ ನೀರ್ ದೋಸೆ ಸಿನಿಮಾ ನಿರ್ದೇಶಕ ವಿಜಯ್ ಪ್ರಸಾದ್ ಮಾತ್ರ ರಮ್ಯಾ ಅವ್ರನ್ನ ಬಿಡೊಂಗೆ ಕಾಣ್ತಾ ಇಲ್ಲಾ..ಈಗ ವಿಜಯ್ ಪ್ರಸಾದ್ ನಿರ್ದೇಶನ ಮಾಡಿರೋ ಪರಿಮಳ ಲಾಡ್ಜ್ ನಲ್ಲಿ, ಪದ್ಮಾವತಿ ರಮ್ಯಾ ಪ್ರತ್ಯಕ್ಷ ಆಗಿದ್ದಾರೆ..ಮಾಸ್ ಟೈಟಲ್ ಇಟ್ಟುಕೊಂಡು ಬರ್ತಾ ಇರೋ ಪರಿಮಳ ಲಾಡ್ಜ್ ಸಿನಿಮಾದಲ್ಲಿ ರಮ್ಯಾ ಪೋಟೋದೊಂದಿಗೆ ಸಿನಿಮಾ ಆರಂಭ ಆಗುತ್ತಂತೆ..ಇನ್ನೊಂದು ಕಡೆ ನಿರ್ದೇಶಕ ವಿಜಯ್ ಪ್ರಸಾದ್ ಮಾತ್ರ ರಮ್ಯಾ ಪೋಟೋವನ್ನ ಬಳಸಿಕೊಂಡು ಸಿನಿಮಾಗೆ, ಮೈಲೇಜ್ ತಗೊಳ್ಳುತ್ತಿದ್ದಾರೆ ಎಂಬ ಅನುಮಾನ ಶುರುವಾಗಿದೆ‌..ಆದ್ರೆ ನಿರ್ದೇಶಕರು ಮಾತ್ರ ಯಾವ ಗಿಮಿಕ್ ಮಾಡ್ತಾ ಇಲ್ಲಾ ಅಂತಾರೆ..ಹಾಗೇನಾದರೂ ರಮ್ಯಾ ಬಂದು ಯಾಕೇ ನನ್ನ ಫೋಟೋವನ್ನ ಬಳಸಿಕೊಂಡಿದ್ದೀರಾ ಅಂತಾ ಕೇಳಿದ್ರೆ, ರಮ್ಯಾಗೆ ನಾವು ಉತ್ತರ ಕೊಡ್ತಿವಿ ಅಂತಾ ಹೇಳ್ತಾರೆ..ಈ ಸಿನಿಮಾ ರಂಗದಲ್ಲಿ ಯಾರು ಮಿತ್ರರು ಅಲ್ಲಾ, ಶತ್ರುಗಳು ಅಲ್ಲಾ ಅಂತಾ ವಿಜಯ ಪ್ರಸಾದ್ ಮಾತು..ಯಾಕೇ ಪರಿಮಳ ಲಾಡ್ಜ್ ಚಿತ್ರದಲ್ಲಿ, ರಮ್ಯಾ ಬರ್ತಾರೆ ಅನ್ನೋದಿಕ್ಕೆ, ಈ ಸಿನಿಮಾ ಶುರುವಾಗೋದು ರಮ್ಯಾ ಅವ್ರ ಕಥೆಯಿಂದ ಅಂತೆ..Body:ರಮ್ಯಾ ಜೊತೆ ನಿರ್ದೇಶಕ ವಿಜಯ ಪ್ರಸಾದ್ ಸಿದ್ಲಿಂಗು ಸಿನಿಮಾ ಯಶಸ್ಸು ಕೊಂಡಿದ್ರು..ಇದೇ ಸಕ್ಸಸ್ ಖುಷಿಯಲ್ಲಿ ಸೆಟ್ಟೇರಿದ ಚಿತ್ರವೇ ನೀರ್ ದೋಸೆ.‌ಆದ್ರೆ ಈ ಸಿನಿಮಾದಿಂದ ರಮ್ಯಾ ಹೊರ ಬಂದರು ಕೂಡ ,ನಿರ್ದೇಶಕ ವಿಜಯ ಪ್ರಸಾದ್ ಮಾತ್ರ ರಮ್ಯಾ ಅವ್ರನ್ನ ಮಾತ್ರ ಬಿಡ್ತಾ ಇಲ್ಲಾ‌‌ ಅನ್ನೋದು ವಿಪರ್ಯಾಸ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.