ಅಮಲಾ ಜತೆ ವಿಚ್ಛೇದನ ಪಡೆದಿರುವ ವಿಜಯ್ ಇತ್ತೀಚಿಗಷ್ಟೆ ಮತ್ತೊಂದು ಮದುವೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೌನವಾಗಿದ್ದ ಅಮಲಾ, ಇದೀಗ ವಿಚ್ಛೇದಿತ ಪತಿಗೆ ಹೊಸ ಮದುವೆಗೆ ಹರಿಸಿದ್ದಾರೆ. ಅವರ ಬಗ್ಗೆ ಪಾಸಿಟಿವ್ ಆಗಿ ಮಾತಾಡಿರುವ ಈ ಚೆಲುವೆ ಹೊಸ ಜೀವನಕ್ಕೆ ಕಾಲಿಟ್ಟ ಆ ದಂಪತಿಗೆ ಶುಭಾಶಯ ಕೋರಲು ಬಯಸುತ್ತೇನೆ. ಅವರು ಮನೆತುಂಬ ಮಕ್ಕಳನ್ನು ಪಡೆಯಲಿ ಎಂದು ವಿಶ್ ಮಾಡಿದ್ದಾರೆ.
2014 ರಲ್ಲಿ ಪೋಟೋಗ್ರಾಫರ್ ವಿಜಯ್ ಜತೆ ಅಮಲಾ ಹಸೆಮಣೆ ಏರಿದ್ದರು. ಮೂರು ವರ್ಷಗಳ (2017) ನಂತರ ದಾಂಪತ್ಯ ಜೀವನ ಕಡಿದುಕೊಂಡು ಆತನಿಂದ ವಿಚ್ಛೇದನ ಪಡೆದು ದೂರವಾಗಿದ್ದರು. ವಿಜಯ್ ಈಗ ಬೇರೆ ಮ್ಯಾರೇಜ್ ಮಾಡಿಕೊಂಡಿದ್ದಾರೆ.
ಸದ್ಯ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಆಡೈ ಸಿನಮಾದಲ್ಲಿ ಬ್ಯುಸಿಯಾಗಿರುವ ಅಮಲಾ, ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದಾರೆ.