ದಾಂಪತ್ಯ ಮುರಿದು ಬಿದ್ದ ಬಳಿಕ ತಮ್ಮ ಜೀವನದಲ್ಲಾದ ಬದಲಾವಣೆ ಬಗ್ಗೆ ನಟಿ ಅಮಲಾ ಪೌಲ್ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಆಂತರಿಕ ಜೀವನದ ಕಹಿಸತ್ಯಗಳನ್ನು ಹೊರಹಾಕಿದ್ದಾರೆ.
ಏನೂ ಗೊತ್ತಿಲ್ಲದೇ 17 ನೇ ವಯಸ್ಸಿಗೆ ಸಿನಿಮಾ ಲೋಕಕ್ಕೆ ಕಾಲಿಟ್ಟೆ. ದಾಂಪತ್ಯ ಜೀವನ ಅಂತ್ಯಗೊಂಡಾಗ ಅದನ್ನು ಸಹಿಸಿಕೊಳ್ಳುವ ಶಕ್ತಿ ನನಗಿರಲಿಲ್ಲ. ಒಂಟಿತನ ಕಾಡುತ್ತಿತ್ತು. ಎಲ್ಲಿಯಾದರೂ ದೂರ ಹೋಗಬೇಕು ಎನ್ನಿಸುತ್ತಿತ್ತು. ತುಂಬಾ ನೋವು ಅನುಭವಿಸುತ್ತಿದ್ದೆ. ಹಿಮಾಲಯಕ್ಕೆ ಹೋದೆ, ಅಲ್ಲಿಂದ ನನ್ನ ಜೀವನಕ್ಕೆ ಹೊಸ ತಿರುವು ದೊರೆಯಿತು. ಕೆಲ ವರ್ಷಗಳ ನಂತರ ಒಬ್ಬಂಟಿತನ ಕಳೆದು ಹೋಯಿತು. ಮನಸ್ಸಿನಲ್ಲಿದ್ದ ಭಾರ, ದುಗುಡ ಮಾಯವಾದವು. ಮೊಬೈಲ್ನಿಂದ ದೂರವಾದೆ. ಎಲ್ಲೆಂದರಲ್ಲಿ ಟೆಂಟ್ಗಳಲ್ಲಿ ನಿದ್ರಿಸುತ್ತಿದ್ದೆ. ಈ ಯಾತ್ರೆಯ ಬಳಿಕ ನಾನು ಸಂಪೂರ್ಣವಾಗಿ ಬದಲಾದೆ.
ಪುದುಚೇರಿಯಲ್ಲಿ ಸರಳವಾಗಿ ಬದುಕುತ್ತಿದ್ದೇನೆ. ತಿಂಗಳಿಗೆ ₹20,000 ಮಾತ್ರ ಖರ್ಚು ಮಾಡುತ್ತೇನೆ. ಐಷಾರಾಮಿ ಜೀವನ ಸಾಕೆನ್ನಿಸಿತು. ದುಬಾರಿ ಬೆಂಝ್ ಕಾರ್ ಮಾರಿದೆ. ಮನೆಗೆ ದಿನಸಿ ವಸ್ತುಗಳನ್ನು ತರಲು ಸೈಕಲ್ ತೆಗೆದುಕೊಂಡೆ. ಹಿಮಾಲಯದಲ್ಲೇ ನೆಲಿಸಬೇಕೆನ್ನುವ ಬಯಕೆ ಇದೆ. ಆದರೆ, ಅದು ತುಂಬಾ ಕಷ್ಟ, ಆದ್ದರಿಂದ ಪುದುಚೇರಿಯಲ್ಲಿ ವಾಸಿಸುತ್ತಿದ್ದೇನೆ. ಬ್ಯೂಟಿ ಪಾರ್ಲರ್ಗಳಿಗೆ ಹೋಗುವುದನ್ನು ನಿಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.