‘ದಯವಿಟ್ಟು ಅವರ ಸಾವಿನ ಫೋಟೋ ಹಾಕ್ಬೇಡಿ’.. ಪುನೀತ್ ಅಂತಿಮ ದರ್ಶನ ಪಡೆದ ನಟಿ ಅದಿತಿ, ಎಸ್ ನಾರಾಯಣ್ - ಅದಿತಿ ಪ್ರಭುದೇವ
ಪುನೀತ್ ರಾಜ್ಕುಮಾರ್ ಅಂತಿಮ ದರ್ಶನದಲ್ಲಿ ಅಭಿಮಾನಿಗಳು ದಂಡೇ ಸೇರಿದೆ. ನಟ-ನಟಿಯರು ರಾಜಕಾರಣಿಗಳು ಇದೀಗ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಪುನೀತ್ ಅಂತಿಮ ದರ್ಶನ ಪಡೆದ ನಟಿ ಅದಿತಿ, ಎಸ್ ನಾರಾಯಣ್
ಬೆಂಗಳೂರು: ಪುನೀತ್ ಅಂತಿಮ ದರ್ಶನಕ್ಕೆ ಕಂಠೀರವ ಸ್ಟುಡಿಯೋಕ್ಕೆ ಅಭಿಮಾನಿಗಳ ಸಾಗರವೇ ಹರಿದುಬರುತ್ತಿದೆ. ಗಣ್ಯಾತಿಗಣ್ಯರು, ಇತರ ಚಿತ್ರರಂಗದ ಕಲಾವಿದರು ಕೂಡ ಅಪ್ಪುವಿನ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಕಲಾ ಸಾಮ್ರಾಟ್ ಎಸ್. ನಾರಾಯಣ್, ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ, ನಟಿ ಅದಿತಿ ಪ್ರಭುದೇವ ಅಂತಿಮ ದರ್ಶನ ಪಡೆದಿದ್ದಾರೆ. ಯಾವಾಗಲೂ ಅವರ ನಗು ಮುಖ ನೋಡುತ್ತಿದ್ದೆವು. ಇದೇ ಮೊದಲ ಬಾರಿಗೆ ಮುಖದಲ್ಲಿ ನಗು ಇಲ್ಲ. ದಯವಿಟ್ಟು ಅವರ ಸಾವಿನ ಫೋಟೋ ಹಾಕಬೇಡಿ ಅಂತ ನಟಿ ಅದಿತಿ ಮನವಿ ಮಾಡಿದರು.
ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿ, ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ, ಚಿಕ್ಕವಯಸ್ಸಿನಲ್ಲೇ ಹೆಸರು ಮಾಡಿದ್ದವರು. ಉತ್ತಮ ಸಂದೇಶಗಳ ಚಿತ್ರ ನೀಡುತ್ತಿದ್ದರು ಎಂದಿದ್ದಾರೆ.