ಹೊಸ ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿ. ಈ ಹಬ್ಬವನ್ನು ರಾಜ್ಯದೆಲ್ಲೆಡೆ ಬಹಳ ಸಡಗರದಿಂದ ಆಚರಿಸಲಾಗುತ್ತಿದೆ. ಸ್ಯಾಂಡಲ್ವುಡ್ನಲ್ಲೂ ಹಬ್ಬದ ಕಳೆಕಟ್ಟಿದೆ.
ಹೀಗಾಗಿ, ರಿಯಲ್ ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ನಟ ರಿಷಿ ಹಾಗೂ ಯುವ ನಟ ಝೈದ್ ಖಾನ್ ತಮ್ಮ ಸಿನಿಮಾಗಳ ಪೋಸ್ಟರ್‌ಗಳನ್ನ ಬಿಡುಗಡೆ ಮಾಡಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ.
![ಉಪೇಂದ್ರರ ಹೋಮ್ ಮಿನಿಸ್ಟರ್ ಪೋಸ್ಟರ್](https://etvbharatimages.akamaized.net/etvbharat/prod-images/14184068_1069.jpg)
ಉಪೇಂದ್ರ ಹಾಗೂ ವೇದಿಕಾ ಅಭಿನಯದ ಹೋಮ್ ಮಿನಿಸ್ಟರ್ ಚಿತ್ರದ ಪೋಸ್ಟರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಸಂಕ್ರಾಂತಿ ಹಬ್ಬದ ಶುಭಾಶಯವನ್ನ ಕೋರಲಾಗಿದೆ.
ಇನ್ನು ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಗಣೇಶ್, ದಿಗಂತ್, ಪವನ್ ಕುಮಾರ್ ಅಭಿನಯದ ಗಾಳಿಪಟ-2 ಚಿತ್ರದ ಹೊಸ ಪೋಸ್ಟರ್ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಎಂ.ರಮೇಶ್ ರೆಡ್ಡಿ ಗಾಳಿಪಟ-2 ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
![ರಿಷಿ ಅಭಿನಯದ ಅಲ್ಲೇ ಡ್ರಾ ಅಲ್ಲೇ ಬಹುಮಾನ ಪೋಸ್ಟರ್](https://etvbharatimages.akamaized.net/etvbharat/prod-images/14184068_158.jpg)
ಇದರ ಜೊತೆಗೆ ಕವಲುದಾರಿ ಚಿತ್ರದ ಮೂಲಕ ಗಮನ ಸೆಳೆದ ರಿಷಿ ಅಭಿನಯದ 'ಅಲ್ಲೇ ಡ್ರಾ ಅಲ್ಲೇ ಬಹುಮಾನ' ಎಂಬ ಹೊಸ ಚಿತ್ರವನ್ನು ಘೋಷಿಸಲಾಗಿದೆ. ಇದರಲ್ಲೂ ಚಿತ್ರತಂಡ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಹೇಳಿದೆ.
![ಝೈದ್ ಖಾನ್ರ ಬನಾರಸ್ ಸಿನಿಮಾದ ಪೋಸ್ಟರ್](https://etvbharatimages.akamaized.net/etvbharat/prod-images/14184068_473.jpg)
ಈ ಸ್ಟಾರ್ಗಳ ಮಧ್ಯೆ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ಸೋನಾಲ್ ಮಾಂಟೆರೊ ಅಭಿನಯಿಸಿರುವ, ನಿರ್ದೇಶಕ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಸಿನಿರಸಿಕರಿಗೆ ಮಕರ ಸಂಕ್ರಮಣ ಹಬ್ಬದ ಶುಭಾಶಯ ಕೋರಲಾಗಿದೆ.
ಇದನ್ನೂ ಓದಿ: ಪವಿತ್ರ ಗಂಗಾನದಿಯಲ್ಲಿ ಮಿಂದೇಳುತ್ತಿರುವ ಭಕ್ತರು: ಪೊಂಗಲ್ ಆಚರಿಸಿದ ಪುದುಚೇರಿ ಲೆಫ್ಟಿನೆಂಟ್ ಗವರ್ನರ್