ಓಬಿರಾಯನ ಕಥೆ ಸಿನಿಮಾದ ಕಾರ್ಯಕ್ರಮಕ್ಕೆ ಬಂದಿದ್ದ ಯಶ್, ಕೆಜಿಎಫ್ ಚಾಪ್ಟರ್ 2 ಚಿತ್ರದ ಕೆಲವು ಇಂಟ್ರಸ್ಟ್ರಿಂಗ್ ವಿಚಾರಗಳನ್ನು ಬಿಚ್ವಿಟ್ಟಿದ್ದಾರೆ. ಚಿತ್ರದಲ್ಲಿ ಯಶ್ ಅವರಿಗೆ 1971ರ ದಶಕದ ಲುಕ್ ಇದೆಯಂತೆ. ಈ ಪಾತ್ರಕ್ಕಾಗಿ ಅವರು ಕಳೆದ ಎಂಟು ತಿಂಗಳಿಂದ ವರ್ಕ್ ಔಟ್ ಮಾಡ್ತಾ ಇದ್ದಾರಂತೆ.
ಟಾಲಿವುಡ್ನ ಕ್ರಿಯೇಟಿವ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಹಾಗು ಕೆಜಿಎಫ್ ಚಾಪ್ಟರ್ 2 ಸಿನಿಮಾ ಒಂದೇ ದಿನ ರಿಲೀಸ್ ಆಗುತ್ತೆ ಅಂತಾ ಹೇಳಲಾಗಿತ್ತು. ಅದಕ್ಕೆ ಯಶ್ ಎರಡು ಹೈ ಬಜೆಟ್ ಸಿನಿಮಾಗಳನ್ನ ಒಂದೇ ದಿನ ರಿಲೀಸ್ ಮಾಡ್ತಾರಾ? ನಾವು ಆ ಚಿತ್ರ ತಂಡದೊಂದಿಗೆ ಟಚ್ನಲ್ಲಿ ಇದ್ದೀವಿ. ಈ ಎರಡು ಸಿನಿಮಾಗಳನ್ನ ವಿತರಣೆ ಮಾಡ್ತಾ ಇರೋದು ಅನಿಲ್ ತದಾನಿ, ಇದು ಅವ್ರಿಗೆ ಗೊತ್ತಿದೆ ಅಂತಾ ಹೇಳಿದ್ರು.
ಇದನ್ನು ಓದಿ: 'ಯೆಸ್ ಬ್ಯಾಂಕ್ ಠೇವಣಿದಾರರ ಪ್ರತಿ ಪೈಸೆಯೂ ಸೇಫ್ ಆಗಿದೆ'
ಏಪ್ರಿಲ್ನಲ್ಲಿ ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡಲಾಗುತ್ತೆ ಅಂತಾ ಹೇಳಲಾಗಿತ್ತು. ಈಗ ಏಪ್ರಿಲ್ನಲ್ಲಿ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಡೇಟ್ ಅನೌಂಸ್ ಮಾಡಲಾಗಿದೆ. ಆದರೆ ನಾವು ಯಾವ ಸಿನಿಮಾಗೂ ಪೈಪೋಟಿ ಕೊಡೋಲ್ಲ ಅಂತಾ ಯಶ್ ಹೇಳಿದ್ರು.
ಕೆಜಿಎಫ್ 2 ಸಿನಿಮಾ ಇದೇ ವರ್ಷ ಬರುತ್ತೆ. ಅದು ಯಾವಾಗ ಅಂತಾ ನಾವೇ ಅನೌಂಸ್ ಮಾಡ್ತೀವಿ ಅಂತಾ ಯಶ್ ಹೇಳಿದ್ರು. ಆದರೆ ಏಪ್ರಿಲ್ನಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಆಗುತ್ತೆ ಅಂತಾ ಹೇಳಲಾಗಿತ್ತು. ಈಗ ಯಶ್ ಹೇಳುವ ಪ್ರಕಾರ, ಯಶ್ ಲಕ್ಕಿ ತಿಂಗಳು ಅಂತಾ ಕರೆಯಿಸಿಕೊಂಡಿರುವ ಡಿಸೆಂಬರ್ ಎರಡನೇ ವಾರದಲ್ಲಿ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋದು ಪಕ್ಕಾ ಅನಿಸುತ್ತೆ.
ಇದನ್ನು ಓದಿ: 20 ಸಿಕ್ಸರ್, 55 ಎಸೆತಗಳಲ್ಲಿ 158 ರನ್.. ಪಾಂಡ್ಯ ಮತ್ತೊಂದು ಶತಕ, ಟಿ-20 ಇತಿಹಾಸದಲ್ಲಿ ಹೊಸ ದಾಖಲೆ!