ಹುಬ್ಬಳ್ಳಿ: 'ಮಾಲ್ಗುಡಿ ಡೇಸ್' ಚಿತ್ರದ ಪ್ರೋಮೋಷನ್ ಹಿನ್ನೆಲೆಯಲ್ಲಿ ನಗರಕ್ಕೆ ಬಂದಿರುವ ನಟ ವಿಜಯ ರಾಘವೇಂದ್ರ (ಬಿಆರ್ಟಿಎಸ್ ) ಚಿಗರಿ ಬಸ್ನಲ್ಲಿ ಪ್ರಯಾಣಿಸುವ ಮೂಲಕ ಸಾರ್ವಜನಿಕ ಸಾರಿಗೆ ಬಗ್ಗೆ ಜನಜಾಗೃತಿ ಮೂಡಿಸಿದರು.
ಜ. 7ರಂದು ರಾಜ್ಯಾದ್ಯಂತ ಬಿಡುಗಡೆಗೊಳುತ್ತಿರುವ ಮಾಲ್ಗುಡಿ ಡೇಸ್ ಚಿತ್ರದ ಕುರಿತು ಇಲ್ಲಿನ ಬಿವಿಬಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ನಂತರ ಬಿವಿಬಿ ಕ್ಯಾಂಪಸ್ನಿಂದ ಕಿಮ್ಸ್ ಆಸ್ಪತ್ರೆ ಪ್ರವೇಶ ದ್ವಾರದ ಬಸ್ ನಿಲ್ದಾಣದವರೆಗೆ ಬಿಆರ್ಟಿಎಸ್ ಬಸ್ನಲ್ಲಿ ಪ್ರಯಾಣಿಸಿ ಸಾರ್ವಜನಿಕ ಸಾರಿಗೆ ಕುರಿತು ಜನಜಾಗೃತಿ ಮೂಡಿಸಿದರು. ಜೊತೆಗೆ ಬಿಆರ್ಟಿಎಸ್ ಬಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.