ETV Bharat / sitara

ಇಂಡಸ್ಟ್ರಿಯಲ್ಲಿ ನನ್ನ ಮಗ ಸ್ಟಾರ್​ ಆಗ್ತಾನೋ, ಇಲ್ವೋ  ಗೊತ್ತಿಲ್ಲ.. ಆದ್ರೆ ಒಳ್ಳೆ ನಟ ಆಗ್ತಾನೆ: ರವಿಚಂದ್ರನ್ ಭವಿಷ್ಯ - ವಿ ರವಿಚಂದ್ರನ್

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮನು ಒಳ್ಳೆ ನಟ ಆಗ್ತಾನೆ ಅಂತಾ ಕ್ರೇಜಿ ಸ್ಟಾರ್ ಭವಿಷ್ಯ ನುಡಿದಿದ್ದಾರೆ. ರವಿಮಾಮ ಹೇಳುವ ಹಾಗೆ ನಾನು ನನ್ನ ಮಕ್ಕಳಿಗೆ, ಸಿನಿಮಾ ಬಗ್ಗೆ ಎಷ್ಟು ವ್ಯಾಮೋಹ ಇದೆ, ಎಷ್ಟು ಜವಾಬ್ದಾರಿ ಇದೆ ಅನ್ನೋದನ್ನ ಅವರಿಗೆ ಬಿಟ್ಟಿದ್ದೀನಿ. ಸಹಜವಾಗಿ ನನ್ನ ಅಭಿಮಾನಿಗಳು ಮುಗಿಲ್ ಪೇಟೆ ಸಿನಿಮಾ ನೋಡಿ ಮನುರಂಜನ್ ಆ್ಯಕ್ಟಿಂಗ್ ಚೆನ್ನಾಗಿ ಮಾಡಿದ್ದಾನೆ ಅಂತಾ ಹೇಳಿದಾರಂತೆ.

ರವಿಚಂದ್ರನ್ ಭವಿಷ್ಯ
ರವಿಚಂದ್ರನ್ ಭವಿಷ್ಯ
author img

By

Published : Nov 20, 2021, 5:58 PM IST

ಮುಗಿಲ್ ಪೇಟೆ ಮನುರಂಜನ್ ರವಿಚಂದ್ರನ್ ಅಭಿನಯದ ನಿರೀಕ್ಷೆಯ ಸಿನಿಮಾ. ಟ್ರೈಲರ್ ಹಾಗು ಹಾಡುಗಳಿಂದ ಗಮನ ಸೆಳೆದಿದ್ದ, ಮುಗಿಲ್ ಪೇಟೆ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ತೆರೆ ಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮನುರಂಜನ್ ರವಿಚಂದ್ರನ್ ತಮ್ಮ ಹಿಂದಿನ ಸಿನಿಮಾಗಳಿಗಿಂತ ನಟನೆ ಜೊತೆಗೆ ಭರ್ಜರಿ ಆ್ಯಕ್ಷನ್ ಮಾಡುವ ಮೂಲಕ ಭರವಸೆ ಮೂಡಿಸಿದ್ದಾರೆ.

ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಇಟ್ಟುಕೊಂಡು ಬಂದ ಸಿನಿಮಾವನ್ನ ಭರತ್ ನಾವುಂದ ನಿರ್ದೇಶನ ಮಾಡಿದ್ದಾರೆ. ಇದೀಗ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಮಗ ಮನುರಂಜನ್ ನಟನೆಯ ಮುಗಿಲ್ ಪೇಟೆ ಸಿನಿಮಾವನ್ನ ನೋಡಿ ಮೆಚ್ಚಿಕೊಂಡಿದ್ದಾರೆ.

ರವಿಚಂದ್ರನ್ ಭವಿಷ್ಯ

ಸಾಮಾನ್ಯವಾಗಿ ರವಿಚಂದ್ರನ್ ತಮ್ಮ ಮಕ್ಕಳ ಸಿನಿಮಾಗಳ ಬಗ್ಗೆ ಮಾತನಾಡುವವರು ಅಲ್ಲ. ಯಾಕಂದ್ರೆ ನನ್ನ ಹೆಸರು ಇಲ್ಲದೆ ತಮ್ಮ ಮಕ್ಕಳು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಅನ್ನೋದು ರವಿಚಂದ್ರನ್ ಅವರ ಸಿದ್ಧಾಂತ. ಹೀಗಾಗಿ ಅವರು ಮಕ್ಕಳ ಸಿನಿಮಾ ಬಗ್ಗೆ ಎಂದೂ ಮಾತನಾಡಿರಲಿಲ್ಲ. ಆದ್ರೀಗ ಮನುರಂಜನ್ ನಟನೆಯ ಮುಗಿಲ್ ಪೇಟೆ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಮಗನ ಸಿನಿಮಾ ಬಗ್ಗೆ ರಾಜಾಜಿನಗರದ ನಿವಾಸದಲ್ಲಿ ಮಾತನಾಡಿದ ಕ್ರೇಜಿ ಸ್ಟಾರ್​, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮನು ಒಳ್ಳೆ ನಟ ಆಗ್ತಾನೆ ಅಂತಾ ಭವಿಷ್ಯ ನುಡಿದಿದ್ದಾರೆ. ರವಿಮಾಮ ಹೇಳುವ ಹಾಗೆ ನಾನು ನನ್ನ ಮಕ್ಕಳಿಗೆ, ಸಿನಿಮಾ ಬಗ್ಗೆ ಎಷ್ಟು ವ್ಯಾಮೋಹ ಇದೆ, ಎಷ್ಟು ಜವಾಬ್ದಾರಿ ಇದೆ ಅನ್ನೋದನ್ನ ಅವರಿಗೆ ಬಿಟ್ಟಿದ್ದೀನಿ. ಸಹಜವಾಗಿ ನನ್ನ ಅಭಿಮಾನಿಗಳು ಮುಗಿಲ್ ಪೇಟೆ ಸಿನಿಮಾ ನೋಡಿ ಮನುರಂಜನ್ ಆ್ಯಕ್ಟಿಂಗ್ ಚೆನ್ನಾಗಿ ಮಾಡಿದ್ದಾನೆ ಅಂತಾ ಹೇಳಿದಾರಂತೆ

ರವಿಚಂದ್ರನ್ ಭವಿಷ್ಯ

ಆಗ ರವಿಚಂದ್ರನ್ ಒಮ್ಮೆ ಮುಗಿಲ್ ಪೇಟೆ ಸಿನಿಮಾ ನೋಡುವ ಆಸೆ ಬಂದು ಸಿನಿಮಾ ನೋಡಿದ್ರಂತೆ. ಅದರಂತೆ ಮನು ಫ್ಯೂಚರ್ ನಲ್ಲಿ ಪ್ರಾಮಿಸ್ಸಿಂಗ್ ಹೀರೋ ಆಗ್ತಾನೆ ಅಂತಾ ಅನಿಸಿದೆಯಂತೆ. ಇಡೀ ಸಿನಿಮಾವನ್ನ ಕಾಮಿಡಿ ಮೂಲಕ ಹೇಳಿದ್ದಾರೆ. ಸಿನಿಮಾ ನೋಡುವವರಿಗೆ ಆಗಾಗ ನಗು ತರಿಸುತ್ತೆ. ಸಿನಿಮಾದಲ್ಲಿ ಎಮೋಷನ್ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಓವರ್ ಆಲ್ ಸಿನಿಮಾ ಬಹಳ ಚೆನ್ನಾಗಿ ಮಾಡಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಸಿನಿಮಾ ಲೋಕೇಶನ್ ಚೆನ್ನಾಗಿದೆ. ಚಿತ್ರದಲ್ಲಿ ಮನು ಜೊತೆ ರಂಗಾಯಣ ರಘು ಪಾತ್ರ ಚೆನ್ನಾಗಿ ಕ್ಯಾರಿ ಆಗುತ್ತೆ. ಹೀರೋಯಿನ್ ಕೂಡ ಮನು ಜೊತೆ ಚೆನ್ನಾಗಿ ಕಾಣಿಸುತ್ತಾಳೆ. ನೋವಿನ‌‌ ಸೀನ್​ಗಳ ಮಧ್ಯೆ ಮ್ಯೂಸಿಕ್ ಚೆನ್ನಾಗಿದೆ. ಈ ಚಿತ್ರದಲ್ಲಿ ಪ್ಯಾಥೋ ಸಾಂಗ್ ಇಟ್ಟಿದ್ದಾರೆ. ಅದು ಕೂಡ ಚಿತ್ರದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಸಹಜವಾಗಿ ನನಗೆ ಪ್ಯಾಥೋ ಸಾಂಗ್ ಇಷ್ಟ ಆಗೋಲ್ಲ. ಯಾಕಂದ್ರೆ ಒಬ್ಬ ಹೀರೋ ಫೇಮಸ್ ಆದಾಗ ಈ ಪ್ಯಾಥೋ ಹಾಡುಗಳು ವರ್ಕ್ ಔಟ್ ಆಗುತ್ತೆ. ಇಲ್ಲಿ ಮನುಗೆ ಚೆನ್ನಾಗಿ ವರ್ಕ್ ಆಗಿದೆ. ಶ್ರೀಧರ್ ಸಂಭ್ರಮ್ ಚೆನ್ನಾಗಿ ಮ್ಯೂಸಿಕ್ ಮಾಡಿದ್ದಾರೆ ಅಂದರು.

ಮನು ಹಿಂದಿನ ಸಿನಿಮಾಗಳಿಗಿಂತ, ಒಳ್ಳೆ ನಟ ಆಗ್ತಾನೆ. ಹೀರೋ ಯಾವಾಗ ಕಾಮಿಡಿ ಮಾಡ್ತಾನೋ ಆಗ ಸಿನಿಮಾ ಚೆನ್ನಾಗಿರುತ್ತೆ. ಈ ಚಿತ್ರದಲ್ಲಿ ಸಾಧು ಕೋಕಿಲ ಅವರ ಗೆಟಪ್​ ಚೆನ್ನಾಗಿದೆ. ಸಾಧು ನನ್ನ ಕೈಯಲ್ಲಿ ಸಿಕ್ಕಿದ್ದರೆ ಇನ್ನು ಚೆನ್ನಾಗಿ ಹೊಡೆಯುತ್ತಿದ್ದೆ. ಒಟ್ಟಾರೆ ಮುಗಿಲ್ ಪೇಟೆ ಒಂದು ಫೀಲ್ ಗುಡ್ ಸಿನಿಮಾ ಅಂತಾ ರವಿಚಂದ್ರನ್ ಬಣ್ಣಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.