ದೇಶಾದ್ಯಂತ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ, ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ, ನಿರ್ದೇಶಕ ಉಪೇಂದ್ರ ಹೊಸ ಶಿಕ್ಷಣ ನೀತಿಯನ್ನು ಸ್ವಾಗತಿಸಿದ್ದಾರೆ.
ಎಷ್ಟೋ ವರ್ಷಗಳ ನಂತರ ಒಂದು ಬದಲಾವಣೆ ಮಾಡಿರುವುದು ದೊಡ್ಡ ವಿಷಯ. ಅದನ್ನು ಸ್ವಾಗತಿಸಲೇ ಬೇಕು. ಇದರ ಜೊತೆಗೆ ಇನ್ನಷ್ಟು ಬದಲಾವಣೆ ಆಗಬೇಕು. ಪ್ರಾಕ್ಟಿಕಲ್ ಎಜ್ಯುಕೇಷನ್ ಅನ್ನೋದು ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಿ ಕಲಿಸುವುದಲ್ಲ. ಮುಕ್ತವಾದ ಸಮಾಜದಲ್ಲಿ ರಿಯಲ್ ಆಗಿ ಅನುಭವಿಸಿ ಕಲಿಯಬೇಕು ಎಂದರು.
ನಾವು ಅಡುಗೆ ಕಲಿಯ ಬೇಕಾದರೆ ಯಾರ ಬಳಿಯಾದರು ಹೋಗಿ ಕೆಲಸ ಮಾಡಿದರೆ ಕಲಿಯುತ್ತೇವೆ. ಕೆಲವೊಂದು ವಿಷಯಗಳನ್ನು ಪ್ರಾಕ್ಟಿಕಲ್ ಆಗಿ ಕಲಿಯಬೇಕು. ಅದರ ಜೊತೆಗೆ ಸರ್ಟಿಫಿಕೇಟ್ ಶಿಕ್ಷಣ ಕೂಡ ಬೇಕು ಹಾಗೂ ಸರ್ಟಿಫಿಕೇಟ್ ಇಲ್ಲದ ಶಿಕ್ಷಣ ಕೂಡ ಇರಬೇಕು. ಅಲ್ಲದೇ ತುಂಬಾ ವಿಶಾಲವಾದ ಬದಲಾವಣೆ ಮುಂದೆ ಆಗಬೇಕು. ಬದಲಾವಣೆ ಆಗುತ್ತೆ ಎಂದು ನಾನು ಕೂಡ ಅಂದು ಕೊಂಡಿದ್ದೇನೆ ಎಂದು ಹೇಳಿದರು.