ಚೆನ್ನೈ : ತಮಿಳು ಸೂಪರ್‌ಸ್ಟಾರ್ ಸೂರ್ಯ ಅವರ ನಟನೆಯ ‘ಜೈ ಭೀಮ್’(Jai Bhim) ಚಿತ್ರಕ್ಕೆ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಇದರ ಬೆನ್ನಲ್ಲೇ ನಟ ಸೂರ್ಯ(Actor Suriya) ಹಾಗೂ 2D ಪ್ರೊಡಕ್ಸನ್ ಸೇರಿಕೊಂಡು ಚಿತ್ರದ ಪ್ರೇರಣೆಯಾಗಿರುವ ಪಾರ್ವತಿ ಅಮ್ಮಾಳ್ಗೆ 15 ಲಕ್ಷ ರೂ. ಚೆಕ್ ನೀಡಿದ್ದಾರೆ.
ಜೈ ಭೀಮ್(Jai Bhim movie) ಚಿತ್ರ ಪಾರ್ವತಿ ಅಮ್ಮಾಳ್(Parvati Ammal) ನಿಜ ಜೀವನ ಚರಿತ್ರೆಯಿಂದ ಪ್ರೇರಣೆಯಾಗಿದೆ. ಚಿತ್ರ ಯಶಸ್ಸು ಕಾಣುತ್ತಿದ್ದಂತೆ ಅನೇಕ ಸಂಘ-ಸಂಸ್ಥೆಗಳು ಪಾರ್ವತಿ ಅಮ್ಮಾಳ್ಗೆ ಸಹಾಯಹಸ್ತ ನೀಡುತ್ತಿವೆ.
ಈ ವಿಚಾರವಾಗಿ ಕಳೆದ ಮೂರು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ನಟ ಸೂರ್ಯ ಪಾರ್ವತಿ ಅಮ್ಮಾಳ್ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ ಇಡುವುದಾಗಿ ತಿಳಿಸಿದ್ದರು. ಅದರಂತೆ ನಿನ್ನೆ ಅವರನ್ನ ಭೇಟಿ ಮಾಡಿರುವ ನಟ ಹಾಗೂ 2D ಪ್ರೊಡಕ್ಷನ್ ಬ್ಯಾನರ್ 15 ಲಕ್ಷ ರೂ. ಚೆಕ್ ನೀಡಿದ್ದಾರೆ.
ನವೆಂಬರ್ 2ರಂದು ಜೈ ಭೀಮ್ ಚಿತ್ರ ರಿಲೀಸ್ ಆಗಿದೆ. ಪಾರ್ವತಿ ಅಮ್ಮಾಳ್ ಅವರ ನಿಜ ಜೀವನದ ಸ್ಟೋರಿ ಇದಾಗಿದೆ. ಆಕೆಯ ಪತಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ನ್ಯಾಯಕ್ಕಾಗಿ ಅವಿರತ ಹೋರಾಟ ನಡೆಸಿದ್ದರು.
ಇದರ ಆಧಾರದ ಮೇಲೆ ಚಿತ್ರ ನಿರ್ಮಾಣಗೊಂಡಿದೆ. ಇದರಲ್ಲಿ ಚಿತ್ರದಲ್ಲಿ ಪ್ರಕಾಶ್ ರಾಜ್, ರಜಿಶಾ ವಿಜಯನ್, ಮಣಿಕಂಜನ್ ರಾವ್ ರಮೇಶ್ ಮತ್ತು ಲಿಜೋ ಮೋಲ್ ಜೋಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿರಿ: 'ಜೈ ಭೀಮ್' ಚಿತ್ರದ ಸ್ಫೂರ್ತಿ ಪಾರ್ವತಿ ಅಮ್ಮಾಳ್ಗೆ 10 ಲಕ್ಷ ರೂ. ನೀಡಿದ ನಟ ಸೂರ್ಯ
ಜೈಭೀಮ್ 1993ರಲ್ಲಿ ಮದ್ರಾಸ್ ಹೈಕೋರ್ಟ್ನಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರ ಅವರು ವಕೀಲರಾಗಿದ್ದಾಗ ಹೋರಾಡಿರುವ ಪ್ರಕರಣವಾಗಿದೆ. ತಮ್ಮ ಅವಧಿಯಲ್ಲಿ ವಕೀಲ ಚಂದ್ರು ಅವರು 96,000ಕ್ಕೂ ಹೆಚ್ಚು ಪ್ರಕರಣ ವಿಲೇವಾರಿ ಮಾಡಿದ್ದಾರೆ. ಅದರಲ್ಲಿ ಅನೇಕ ಮಹತ್ವದ ತೀರ್ಪು ಸೇರಿಕೊಂಡಿವೆ.