ತಮಿಳುನಾಡು: ತನ್ನ ಶೈಕ್ಷಣಿಕ ಸಮಯದಲ್ಲಿ ಎದುರಾದ ಸಂಕಷ್ಟಗಳನ್ನು ದುಃಖದಿಂದ ಹಂಚಿಕೊಂಡ ವಿದ್ಯಾರ್ಥಿನಿಯ ಬೆನ್ನು ತಟ್ಟಿ ನಟ ಸೂರ್ಯ ಸಮಾಧಾನಪಡಿಸಿದ್ದು, ಈ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಬಡ ಮಕ್ಕಳ ಶಿಕ್ಷಣಕ್ಕಾಗಿ ನಿಧಿ ನೀಡುವ ಕಾರ್ಯಕ್ರಮವನ್ನು ಅಗರಂ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ವಿದ್ಯಾರ್ಥಿನಿಯೊಬ್ಬಳು ವೇದಿಕೆಯಲ್ಲಿ ತನ್ನ ಶೈಕ್ಷಣಿಕ ಅವಧಿ ಮತ್ತು ವೃತ್ತಿಯ ಪ್ರಾರಂಭದ ಹಂತದಲ್ಲಿ ಎದುರಾದ ಸಂಕಷ್ಟವನ್ನು ದುಃಖದಿಂದ ಹಂಚಿಕೊಂಡಳು.
ಕಾಲಿವುಡ್ನ ಪ್ರಮುಖ ನಟರಲ್ಲಿ ಒಬ್ಬರಾದ ಸೂರ್ಯ, ನಟನೆ, ಚಲನಚಿತ್ರ ನಿರ್ಮಾಣದ ಹೊರತಾಗಿ ಅಗರಂ ಫೌಂಡೇಶನ್ ಸಹ ನಡೆಸುತ್ತಿದ್ದು, ಇದು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿದೆ. ಹೌದು, ಈ ಫೌಂಡೇಶನ್ ಧನಸಹಾಯ ಪಡೆದು ಬಹಳಷ್ಟು ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ.
ಭಾಷಣದಲ್ಲಿ ಹೇಳಿದ್ದೇನು..?
ನಾನು ತಂಜಾವೂರಿನ ಕುಗ್ರಾಮವೊಂದರಿಂದ ಬಂದ ಹುಡುಗಿ. ಹತ್ತನೇ ತರಗತಿ ಮುಗಿಸಿದ ನಂತರ ಮನೆಯ ಪರಿಸ್ಥಿತಿ ಹದಗೆಟ್ಟಿತು. ಹೀಗಾಗಿ ಶಿಕ್ಷಣ ಮುಂದುವರೆಸಲು ಸಾಧ್ಯವಾಗುತ್ತೆ ಎಂದುಕೊಂಡಿರಲಿಲ್ಲ. ಆದರೆ ಅಗರಂ ಫೌಂಡೇಷನ್ ನೀಡಿದ ಸಹಾಯದಿಂದ ಇಂದು ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ್ದೇನೆ.
ಇದೀಗ ಉದ್ಯೋಗಕ್ಕೂ ಸೇರಿದ್ದೇನೆ. ಇದಕ್ಕೆಲ್ಲವೂ ಕಾರಣರಾದ ಸೂರ್ಯ ಅಣ್ಣನಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ನಾನು ಅಗರಂ ಕಾರ್ಯಕ್ರಮದಲ್ಲಿ ಮಾತನಾಡಲಿದ್ದೇನೆ ಎಂದು ಅಮ್ಮನಿಗೆ ತಿಳಿಸಿದ್ದೆ. ಆದರೆ ನನ್ನಮ್ಮಳಿಗೆ ಬರಲಾಗಲಿಲ್ಲ. ಏಕೆಂದರೆ ಈಗಲೂ ಕೂಡ ನನ್ನಮ್ಮ ದೂರದ ಊರಿನಲ್ಲಿ 200 ರೂ.ಗೆ ಮನೆ ಕೆಲಸ ಮಾಡುತ್ತಿದ್ದಾರೆ ಎಂದು ಬಾವೋದ್ವೇಗಕ್ಕೆ ಒಳಗಾದಳು.
ನಂತರ ಮಾತನಾಡಿದ ಅವಳು, ಆದ್ದರಿಂದ ನೀನು ಫೋನ್ ಮಾಡಿ ಮಾತನಾಡು. ನಾನು ಇಲ್ಲಿಂದಲೇ ಕೇಳಿಸಿಕೊಳ್ಳುತ್ತೇನೆ ಎಂದಿದ್ದಾರೆ. ಹೀಗೆ ಗಾಯತ್ರಿ ತನ್ನ ಕಷ್ಟ ಕಾರ್ಪಣ್ಯವನ್ನು ತೆರೆದಿಡುತ್ತಾ ಮಾತು ಮುಂದುವರೆಸುತ್ತಿದ್ದಂತೆ ವೇದಿಕೆಯಲ್ಲಿದ್ದ ಸೂರ್ಯ ಭಾವೋದ್ವೇಗಕ್ಕೆ ಒಳಗಾಗಿದ್ದು, ನಂತರ ತಮ್ಮ ನೋವನ್ನು ನುಂಗುತ್ತಾ ಗಾಯತ್ರಿಯನ್ನು ಸಮಾಧಾನ ಪಡಿಸಿದ್ದಾರೆ.ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೂರ್ಯ ಅವರ ಈ ಮಾನವೀಯ ಗುಣಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.