ETV Bharat / sitara

ಬೆಂಗಳೂರಿನಲ್ಲಿ ಫ್ಯಾನ್ಸ್‌ ಜೊತೆ ಮದಗಜ ಸಿನಿಮಾ ವೀಕ್ಷಿಸಿದ ಶ್ರೀಮುರುಳಿ ಅಂಡ್‌ ಟೀಂ

ಅಭಿಮಾನಿಗಳ ಜೊತೆಯಲ್ಲಿ ಕುಳಿತು ನಟ ಶ್ರೀಮುರಳಿ ಹಾಗೂ ಚಿತ್ರ ತಂಡ ಮದಗಜ ಚಿತ್ರವನ್ನು ವೀಕ್ಷಿಸಿದೆ. ಮದಗಜ ಸಿನಿಮಾದ ಸಕ್ಸಸ್‌ನ ಕ್ರೆಡಿಟ್‌ ಅನ್ನು ನನ್ನ ಟೀಂಗೆ ಕೊಡ್ತೀನಿ ಅಂತ ಶ್ರೀಮುರಳಿ ಹೇಳಿದ್ದಾರೆ.

actor Srimurali and madagaja team watched movie with fans in bangalore
ಬೆಂಗಳೂರಿನಲ್ಲಿ ಫ್ಯಾನ್ಸ್‌ ಜೊತೆ ಮದಗಜ ಸಿನಿಮಾ ವೀಕ್ಷಿಸಿದ ಶ್ರೀಮುರುಳಿ ಅಂಡ್‌ ಟೀಂ
author img

By

Published : Dec 3, 2021, 5:56 PM IST

Updated : Dec 3, 2021, 8:13 PM IST

ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಮದಗಜ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಎಲ್ಲ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ಕೆ.ಜಿ ರಸ್ತೆಯಲ್ಲಿರೋ ಅನುಪಮ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿರುವ ಮದಗಜ ಸಿನಿಮಾವನ್ನ, ನಟ ಶ್ರೀಮುರಳಿ, ನಟಿ ಆಶಿಕಾ ರಂಗನಾಥ್, ಖಳ ನಟ ಗರುಡ ರಾಮ್, ಹಾಸ್ಯ ನಟ ಶಿವರಾಜ್ ಕೆ ಆರ್ ಪೇಟೆ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮೊದಲ ಶೋ ನೋಡಿದ್ದಾರೆ. ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ಮದಗಜ ಚಿತ್ರತಂಡ, ಸಿನಿಮಾ ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಸಖತ್ ಖುಷಿಯಾದರು.

'ಮದಗಜ' ಬಿಡುಗಡೆ

ಗಜೇಂದ್ರಗಡ ಹಾಗೂ ಶಿವಗಡ ಎಂಬ ಹಳ್ಳಿಗಳ ಮಧ್ಯೆ ನದಿಯೊಂದು ಹರಿಯುತ್ತಿರುತ್ತದೆ. ಈ ನದಿಯ ನೀರನ್ನು ಶಿವಗಡದವರಿಗೆ ಬಿಡದೆ, ಗಜೇಂದ್ರಗಡ ಜನರಿಗೆ ಅನ್ಯಾಯ ಮಾಡುತ್ತಿರುತ್ತಾರೆ. ಶಿವಗಡದ ಭೈರವನಾಗಿ ಆ ಜನರ ಕಷ್ಟಕ್ಕೆ ಸ್ಪಂದಿಸುವನೇ ಜಗಪತಿ ಬಾಬು. ಆ ಊರಿನ ಜನರ ಭೂಮಿ ಹಾಗೂ ನೀರಿಗಾಗಿ ಮಗ ಸೂರ್ಯನನ್ನ(ಶ್ರೀಮುರಳಿ) ದೂರ ಮಾಡಿಕೊಂಡಿರುತ್ತಾರೆ.

ಅಷ್ಟಕ್ಕೂ ಭೈರವನ ಮಗ ಸೂರ್ಯ ವಾರಾಣಸಿಗೆ ಹೇಗೆ ಹೋಗ್ತಾನೆ? ಎರಡೂ ಊರಿನ ದ್ವೇಷ ಕಡಿಮೆ ಆಗೋದು ಹೇಗೆ? ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೇವಯಾನಿ ಮತ್ತು ಊರನ್ನು ನಾಯಕ ನಟ ಶ್ರೀಮುರಳಿ ಹೇಗೆ ಉಳಿಸಿಕೊಳ್ಳುತ್ತಾರೆ ಅನ್ನೋದೇ ಮದಗಜ ಸಿನಿಮಾದ ಕಥೆ. ಶ್ರೀಮುರಳಿ ಮಾಸ್ ಅವತಾರ ಹಾಗೂ ಆ್ಯಕ್ಷನ್ ಸನ್ನಿವೇಶಗಳಲ್ಲಿ ಅಬ್ಬರಿಸಿರೋದು ಅವ್ರ ಅಭಿಮಾನಿಗಳಿಗೆ ಇಷ್ಟ ಆಗುತ್ತೆ. ಶ್ರೀಮುರಳಿ ಜೋಡಿಯಾಗಿ, ಚಿತ್ರದಲ್ಲಿ ಆಶಿಕಾ ರಂಗನಾಥ್​ ಪಕ್ಕಾ ಹಳ್ಳಿ ಹುಡುಗಿಯಾಗಿ ಗಮನ ಸೆಳೆಯುತ್ತಾರೆ.

ರವಿ ಬಸ್ರೂರ್​ ಸಂಗೀತದ ಬಲ:

ಚಿಕ್ಕಣ್ಣ, ಶಿವರಾಜ್​ ಕೆಆರ್​ ಪೇಟೆ, ಧರ್ಮಣ್ಣ ಕೊಟ್ಟ ಪಾತ್ರಗಳಲ್ಲಿ ಕಚಗುಳಿ ಇಡುತ್ತಾರೆ. ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಂಗೀತ ನಿರ್ದೇಶಕ ರವಿ ಬಸ್ರೂರ್​ ಸಂಗೀತ, ಮದಗಜ ಸಿನಿಮಾದ ಬಲ ಎನ್ನಬಹುದು. ಜಗಪತಿ ಬಾಬು ಪ್ರತಿ ಸೀನ್‌ನಲ್ಲಿ ಊರನ್ನ ಕಾಯುವ ಯಜಮಾನನಾಗಿ ಮಿಂಚಿದ್ದಾರೆ.

ಚಿತ್ರತಂಡದವರ ಪ್ರತಿಕ್ರಿಯೆ

ಶ್ರೀಮುರಳಿ ಅಮ್ಮನ ಪಾತ್ರದಲ್ಲಿ ದೇವಯಾನಿ ನೋಡುಗರ ಕಣ್ಣಲ್ಲಿ ಕಣ್ಣೀರು ತರಿಸುತ್ತಾರೆ. ಕೆಜಿಎಫ್ ಖ್ಯಾತಿಯ, ಗರುಡ ರಾಮ್ ಈ ಚಿತ್ರದ ಸೆಕೆಂಡ್ ಆಫ್ ನಲ್ಲಿ ಅಬ್ಬರಿಸುತ್ತಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅದ್ದೂರಿಯಾಗಿ ಖರ್ಚು ಮಾಡಿರೋದು ಚಿತ್ರದಲ್ಲಿ ಗೊತ್ತಾಗುತ್ತೆ. ಕ್ಯಾಮರಮ್ಯಾನ್ ನವೀನ್​ ಕುಮಾರ್​, ಕ್ಯಾಮೆರಾ ವರ್ಕ್ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ನಿರ್ದೇಶಕ ಮಹೇಶ್ ಕುಮಾರ್ ಆ್ಯಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ಬಹಳ ಚೆನ್ನಾಗಿ ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆ ಒಮ್ಮೆ ಫ್ಯಾಮಿಲಿ ಸಮೇತ ಮದಗಜ ಸಿನಿಮಾವನ್ನ ನೋಡುಬಹುದು.

ಇದನ್ನೂ ಓದಿ: 20ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಮದಗಜ ಸಿನಿಮಾ ಟಿಕೆಟ್​ ಸೋಲ್ಡ್ ಔಟ್

Last Updated : Dec 3, 2021, 8:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.