ಹೈದರಾಬಾದ್: ಸ್ಯಾಂಡಲ್ವುಡ್ನಲ್ಲಿ ಕಿಸ್ ,ಭರಾಟೆ ಸೇರಿದಂತೆ ಅನೇಕ ತೆಲುಗು ಚಿತ್ರಗಳಲ್ಲಿ ನಟನೆ ಮಾಡಿರುವ ಶ್ರೀಲೀಲಾ ಖಾಸಗಿ ಜೀವನದ ವಿಚಾರ ಇದೀಗ ಹೆಚ್ಚು ಸುದ್ದಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಂಧ್ರದ ಖ್ಯಾತ ಉದ್ಯಮಿಯೊಬ್ಬರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಆಂಧ್ರಪ್ರದೇಶದ ಖ್ಯಾತ ಉದ್ಯಮಿಯಾಗಿರುವ ಸುರಪನೇನಿ ಸುಭಾಕರ್ ರಾವ್ ನಮ್ಮ ತಂದೆ ಎಂದು ಖುದ್ದಾಗಿ ಶ್ರೀಲೀಲಾ ಹೇಳಿಕೊಂಡಿದ್ದರು. ಆದರೆ, ಇದಕ್ಕೆ ಖುದ್ದಾಗಿ ಇದೀಗ ಸುಭಾಕರ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಶ್ರೀಲೀಲಾ ನನ್ನ ಮಗಳು ಅಲ್ಲ. ನನ್ನ ಪತ್ನಿ ಜೊತೆಗೆ ವಿಚ್ಛೇದನ ಪಡೆದುಕೊಂಡ ನಂತರ ಅವಳು ಜನಸಿದ್ದಾಳೆ. ಕಳೆದ 20 ವರ್ಷಗಳ ಹಿಂದೆ ನಾನು ಡಿವೋರ್ಸ್ ಪಡೆದುಕೊಂಡಿದ್ದೇನೆ. ಆ ಕೇಸ್ ಇನ್ನೂ ಕೋರ್ಟ್ನಲ್ಲಿ ಇದೆ ಎಂದಿದ್ದಾರೆ. ಶ್ರೀಲೀಲಾಗೆ ನಾನು ಜನ್ಮ ನೀಡಿಲ್ಲ.. ವಿನಾಕಾರಣ ಆಸ್ತಿಗೋಸ್ಕರ ಅವರು ಈ ರೀತಿಯಾಗಿ ಹೇಳಿಕೊಂಡು ತಿರುಗಾಡುತ್ತಿದ್ದು, ಶ್ರೀಲೀಲಾ ಮತ್ತು ಆಕೆಯ ತಾಯಿ ನನ್ನ ಹೆಸರು ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಕನ್ನಡದ ಕಿಸ್, ಭರಾಟೆ ಚಿತ್ರಗಳಲ್ಲಿ ನಟನೆ ಮಾಡಿರುವ ನಟಿ ಶ್ರೀಲೀಲಾ ಇದೀಗ ತೆಲುಗು ಚಿತ್ರರಂಗದಲ್ಲಿ ಪೆಳ್ಳಿ ಚಿತ್ರದಲ್ಲೂ ಅಭಿನಯ ಮಾಡಿದ್ದಾರೆ. ಶ್ರೀಲೀಲಾ ಅಮೆರಿಕದಲ್ಲಿ ಜನಸಿದ್ದು, ಅವರ ತಾಯಿ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆರಂಭದಲ್ಲಿ ಮಾಡೆಲಿಂಗ್ನಲ್ಲಿ ತೊಡಗಿಸಿಕೊಂಡಿದ್ದ ನಟಿ, ಶ್ರೀಮುರಳಿ ನಾಯಕನಾಗಿ ನಟನೆ ಮಾಡಿದ್ದ ಭರಾಟೆಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇವರ ತಾಯಿ ಡಾ. ಸ್ವರ್ಣಲತಾ ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ.
