ETV Bharat / sitara

ಶ್ರೀಮುರಳಿಯ 'ಮದಗಜ‌' ಸಿನಿಮಾದ ಹಿಂದಿ ಡಬ್ಬಿಂಗ್​ ರೈಟ್ಸ್​ 8 ಕೋಟಿಗೆ ಮಾರಾಟ.. - madagaja Hindi rights sale

ಭರಾಟೆ ಸಿನಿಮಾದ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಮದಗಜ. ಈ ಸಿನಿಮಾದಲ್ಲಿ ಶ್ರೀಮುರಳಿ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹೊಸ ಅಪ್ಡೇಟ್​​ ಏನು ಅಂದ್ರೆ ಮದಗಜ ಸಿನಿಮಾದ ಹಿಂದಿ ರೈಟ್ಸ್​ 8 ಕೋಟಿಗೆ ಮಾರಾಟವಾಗಿದೆ.

madagaja movie
ಶ್ರೀಮುರಳಿಯ ಮದಗಜ‌
author img

By

Published : Nov 25, 2021, 12:52 PM IST

ಭರಾಟೆ ಸಿನಿಮಾದ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಮದಗಜ. ಈ ಸಿನಿಮಾದಲ್ಲಿ ಶ್ರೀಮುರಳಿ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹೊಸ ಅಪ್ಡೇಟ್​​ ಏನು ಅಂದ್ರೆ ಮದಗಜ ಸಿನಿಮಾದ ಹಿಂದಿ ರೈಟ್ಸ್​ 8 ಕೋಟಿಗೆ ಮಾರಾಟವಾಗಿರುವುದು.

ಸ್ಯಾಂಡಲ್​ವುಡ್​ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಮದಗಜ ಸಿನಿಮಾ ಹಿಂದಿ ಡಬ್ಬಿಂಗ್​ ರೈಟ್ಸ್ ಇಷ್ಟೊಂದು ಪ್ರಮಾಣದಲ್ಲಿ ಮಾರಾಟವಾಗಿರುವುದು ಎಲ್ಲರ ಹುಬ್ಬೇರಿಸಿದೆ. ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಸಿನಿಮಾ ಸದ್ಯ ಟ್ರೈಲರ್​ನಿಂದಲೇ ಸಿನಿಮಾ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಭರ್ಜರಿ ಆ್ಯಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ಹೊಂದಿರುವ ಮದಗಜ ಸಿನಿಮಾ ಬಿಡುಗಡೆ ಮುಂಚೆಯೇ ಹಿಂದಿ ಡಬ್ಬಿಂಗ್ ರೈಟ್ಸ್ ಬರೋಬ್ಬರಿ 8 ಕೋಟಿಗೆ ಮಾರಾಟವಾಗಿದೆ. ಈ ಬಗ್ಗೆ ನಿರ್ದೇಶಕ ಮಹೇಶ್ ಕುಮಾರ್ ಅವರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಶ್ರೀಮುರಳಿ ಅಭಿನಯದ ಚಿತ್ರವೊಂದು ಹಿಂದಿ ಡಬ್ಬಿಂಗ್ ರೈಟ್ಸ್​ಗೆ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು ಇದೇ ಮೊದಲು ಅನ್ನೋದು ಚಿತ್ರತಂಡದ ಮಾತು. ಸಿನಿಮಾದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಇದರ ಜೊತೆಗೆ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಬಹು ಮುಖ್ಯ ಪಾತ್ರ ಮಾಡಿದ್ದಾರೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವೀನ್​ ಕುಮಾರ್​ ಛಾಯಾಗ್ರಹಣ, ಹರೀಶ್​ ಕೊಮ್ಮೆ ಸಂಕಲನ ಚಿತ್ರಕ್ಕಿದೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಮದಗಜ ಸಿನಿಮಾ ಬಿಡುಗಡೆ ಆಗಲಿದೆ.

ಡಿಸೆಂಬರ್ 3ಕ್ಕೆ ರಾಜ್ಯ ಅಲ್ಲದೇ ಬೇರೆ ಭಾಷೆಗಳು ಸೇರಿದಂತೆ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮದಗಜ‌ನ‌ ಆರ್ಭಟ ಶುರುವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.